ಕಾಣೆಯಾಗಿದ್ದ ಮಹಿಳೆ ನಂಜನಗೂಡಿನಲ್ಲಿ ಪತ್ತೆ

Missing
Published on

ಸುಳ್ಯ: ತಾಲೂಕಿನ ಕಲ್ಲುಗುಂಡಿಯ ದಂಡಕಜೆಯಿಂದ ನಾಪತ್ತೆಯಾಗಿದ್ದ, ಮಹಿಳೆಯೊಬ್ಬರು ಮೈಸೂರಿನ ನಂಜನಗೂಡಿನಲ್ಲಿ ಪತ್ತೆಯಾಗಿದ್ದಾರೆ.

ಕಲ್ಲುಗುಂಡಿಯ ದಂಡೆಕಜೆ ನಿವಾಸಿ ಗಂಗಾಧರ ಅವರ ಪತ್ನಿ ಜಯಂತಿ(36) ಜೂನ್ 27ರಂದು ಕೆಲಸಕ್ಕೆಂದು ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆಯಿಂದ ಹೊರಟಿದ್ದ ಜಯಂತಿ ನೇರವಾಗಿ ಮೈಸೂರಿನ ನಂಜನಗೂಡಿನಲ್ಲಿ ಇಳಿದು ಅಲ್ಲಿನ ದೇವಸ್ಥಾನಕ್ಕೆ ಹೋಗಿದ್ದರೆನ್ನಲಾಗಿದೆ. ದಿನದ ಮೂರು ಹೊತ್ತೂ ಅಲ್ಲೇ ಊಟ ಮಾಡಿ ದೇವಸ್ಥಾನದ ಆವರಣದಲ್ಲಿ ಮಲಗುತ್ತಿದ್ದರೆಂದು ತಿಳಿದುಬಂದಿದೆ.

ಜುಲೈ 3ರಂದು ಸಂಜೆ ನಂಜನಗೂಡು ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಯುವಕನೊಬ್ಬನ ಮೊಬೈಲ್ ಪಡೆದು ಗಂಡನಿಗೆ ಕರೆ ಮಾಡಿ, ತಾನು ಮೈಸೂರಿನ ನಂಜನಗೂಡಿನಲ್ಲಿದ್ದು ಮರಳಿ ಮನೆಗೆ ಬರುವುದಾಗಿ ಹೇಳಿದ್ದರು. ಪೊಲೀಸ್ ಸಿಬ್ಬಂದಿ ಗಂಗಾಧರ್‌ರೊಂದಿಗೆ ಮಡಿಕೇರಿಗೆ ತೆರಳಿ, ರಾತ್ರಿ ನಂಜನಗೂಡು ಬಸ್‌ನಲ್ಲಿ ಬಂದ ಜಯಂತಿ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ಗಂಡನ ವಶಕ್ಕೆ ಒಪ್ಪಿಸಿದ್ದಾರೆ. ಗಂಡನ ಕಿರಿಕಿರಿಯಿಂದಾಗಿ ಮನೆ ಬಿಟ್ಟು ತೆರಳಿದ್ದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net