ಸುಳ್ಯ: ದ.ಕ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅರಂತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಡಿಕಾನ ದೇವರ ಗುಂಡಿ ಜಲಪಾತಕ್ಕೆ ಮಳೆಗಾಲದಲ್ಲಿ ಪ್ರವಾಸಿಗರು ತೆರಳದಂತೆ ಮುಂಜಾಗ್ರತಾ ಕ್ರಮವಹಿಸಿ ಅರಂತೋಡು ಗ್ರಾಮ ಪಂಚಾಯಿತಿ ವತಿಯಿಂದ ನಿಷೇಧಾಜ್ಞೆ ಸೂಚನಾ ಫಲಕ ಅಳವಡಿಸಲಾಗಿದೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಇತರೆಡೆಗಳಲ್ಲೂ ಜಲಪಾತ, ಕಿಂಡಿ ಅಣೆಕಟ್ಟು, ತೂಗು ಸೇತುವೆಗಳಲ್ಲಿ ಪ್ರವಾಸಿಗಳು ತೆರಳದಂತೆ ಈಗಾಗಲೇ ನಿರ್ಬಂಧ ಹೇರಲಾಗಿದೆ.ಸೋಣಂಗೇರಿ ಜಲಪಾತ, ಕಲ್ಲುಮುಟ್ಲು ಕಿಂಡಿ ಅಣೆಕಟ್ಟು, ಪಂಜಿಕಲ್ಲಿನ ತೂಗು ಸೇತುವೆಗಳಲ್ಲಿ ಪ್ರವಾಸಿಗಳು ತೆರಳಿ ವೀಕ್ಷಿಸದಂತೆ ಕ್ರಮ ಕೈಗೊಳ್ಳಲಾಗಿದೆ.