ವಿವಾಹಿತೆ ನಾಪತ್ತೆ, ಪೊಲೀಸ್ ದೂರು

missing
Published on

ಉಪ್ಪಿನಂಗಡಿ: ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ವಿವಾಹಿತ ಮಹಿಳೆಯೋರ್ವರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ನೆಲ್ಯಾಡಿ ಗ್ರಾಮದ ಕೂವೆಕೊಪ್ಪ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂವೆಕೊಪ್ಪ ನಿವಾಸಿ ನಾಗೇಶ ಎಂಬುವರ ಪತ್ನಿ, ಮೂವರು ಮಕ್ಕಳ ತಾಯಿ ಭಾರತಿ(35) ನಾಪತ್ತೆಯಾದವರು. ಮನೆ ರಿಪೇರಿಗೆಂದು 85 ಸಾವಿರ ರೂ. ಸಾಲ ಪಡೆದಿದ್ದು, ಬಳಿಕ ಕಳೆದ ಜು.7ರಂದು ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ತೆರಳಿದಾಕೆ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪತ್ನಿ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರಬಹುದೆಂದು ಭಾವಿಸಿದ್ದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ದೂರಿನಲ್ಲಿ ಪತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net