

ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕದ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಸಂಗಮ ಕ್ಷೇತ್ರದ ಸಮೀಪ ಪತ್ತೆಯಾದ ಎಡಪದವಿನ ವ್ಯಕ್ತಿಯೊಬ್ಬರು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ. ಸಮ್ಮುಖ ಮನೆ ಸೇರಿದ್ದಾರೆ.
ಮಂದಿರದ ಪೂಜೆಯ ಸಂದರ್ಭ ಸ್ಥಳೀಯರೊಬ್ಬರ ಅಡಕೆ ತೋಟದಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾದವರನ್ನು ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಸಹಕಾರದೊಂದಿಗೆ ಆಂಬುಲೆನ್ಸ್‌ನಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಅದೇ ವೇಳೆ ಕಾಣೆಯಾದ ವ್ಯಕ್ತಿಯ ಮನೆಯವರು ಠಾಣೆಗೆ ಬಂದಿದ್ದು, ಬಂಟ್ವಾಳದ ಎಡಪದವಿನವರಾದ ಈ ವ್ಯಕ್ತಿ ಕುಟುಂಬ ಸಮೇತರಾಗಿ ಕುಕ್ಕೆ ದೇವಸ್ಥಾನಕ್ಕೆ ಬಂದಿದ್ದರು. ಈ ಸಂದರ್ಭ ಕುಟುಂಬದಿಂದ ಅನಿರೀಕ್ಷಿತವಾಗಿ ಬೇರ್ಪಟ್ಟು ಕಾಣೆಯಾಗಿದ್ದರು ಎಂದು ತಿಳಿಸಿದ್ದಾರೆ. ಬಳಿಕ ಮನೆಯವರ ಜತೆ ಅವರನ್ನು ಕಳುಹಿಸಲಾಯಿತು.