ಸಮುದ್ರಕ್ಕೆ ಬಿದ್ದು ಯುವಕ ನಾಪತ್ತೆ

Published on

ಕಾಸರಗೋಡು: ಕೂಡ್ಲು ಕಾವುಗೋಳಿ ನಿವಾಸಿ ರಾಮ ಎಂಬವರ ಪುತ್ರ ವಿನೋದ್(38) ಎಂಬುವರು ಸಮುದ್ರದಲ್ಲಿ ಬಲೆಬೀಸಿ ಮೀನು ಹಿಡಿಯುವಾಗ ಆಯತಪ್ಪಿ ನೀರಿಗೆ ಬಿದ್ದು ಬಲವಾದ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದಾರೆ. ಬುಧವಾರ ಸಂಜೆ ಮೀನುಹಿಡಿಯಲು ಬಲೆ ಹರಡುತ್ತಿದ್ದಂತೆ ಬಲವಾದ ಅಲೆಗೆ ಸಿಲುಕಿ ನೀರಿಗೆ ಬಿದ್ದಿದ್ದರು. ಕರಾವಳಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕರಾವಳಿ ಪೊಲೀಸ್, ನಾಗರಿಕರು ಹಾಗೂ ಸ್ಥಳೀಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net