

ಉಳ್ಳಾಲ: ಉಡುಪಿ ರನ್ನರ್ಸ್ ಕ್ಲಬ್ ವತಿಯಿಂದ ಮಲ್ಪೆ ಸೀವಾಕ್ ಬಳಿ ಭಾನುವಾರ ನಡೆದ ಉಡುಪಿ ಮ್ಯಾರಥಾನ್ನಲ್ಲಿ ನಿಟ್ಟೆ ಸಂಸ್ಥೆ ಕ್ರೀಡಾಪಟುಗಳು ಸಮಗ್ರ ಚಾಂಪಿಯನ್ಷಿಪ್ ಟ್ರೋಫಿ ಪಡೆದಿದ್ದಾರೆ.
ಕ್ರೀಡಾಪಟುಗಳು 4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕ ಸಹಿತ ಒಟ್ಟು ರೂ. 43,500 ನಗದು ಬಹುಮಾನ ತಮ್ಮದಾಗಿಸಿಕೊಂಡಿರುವರು. 21 ತಂಡಗಳ ಪೈಕಿ ಅತಿ ಹೆಚ್ಚು ಸ್ಪರ್ಧಿಗಳನ್ನು (103 ಕ್ರೀಡಾಪಟುಗಳು) ಹೊಂದಿದ್ದ ನಿಟ್ಟೆ ಸ್ಪೋರ್ಟ್ಸ್ ಕ್ಲಬ್ಗೆ ಅತ್ಯುತ್ತಮ ಕ್ರೀಡಾ ತಂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೈಯಕ್ತಿಕ ಪ್ರದರ್ಶನ: 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ದೀಪಿಕಾ ಚಿನ್ನದ ಪದಕ, 9ನೇ ತರಗತಿ ವಿದ್ಯಾರ್ಥಿನಿ ರಶ್ಮಿತಾ ಕಂಚಿನ ಪದಕ, ಆಂಗ್ಲಮಾಧ್ಯಮ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಖುಷಿ 4ನೇ ಸ್ಥಾನ, ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಮಾನ್ವಿ 5ನೇ ಸ್ಥಾನ ಪಡೆದರು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಆಂಗ್ಲಮಾಧ್ಯಮ ಶಾಲೆ 8ನೇ ತರಗತಿ ವಿದ್ಯಾರ್ಥಿ ವರ್ಷಿತ್ ಚಿನ್ನದ ಪದಕ, 7ನೇ ತರಗತಿ ವಿದ್ಯಾರ್ಥಿ ಭುವನ್ ಬೆಳ್ಳಿಯ ಪದಕ ಪಡೆದರು.
18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಚಿನ್ನದ ಪದಕ, ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ(ವಾಣಿಜ್ಯ) ವಿದ್ಯಾರ್ಥಿನಿ ಸಾಕ್ಷಿ ಬೆಳ್ಳಿ ಪದಕ ಪಡೆದರು.
18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಪಿಯು ಕಾಲೇಜು ಪ್ರಥಮ ಪಿಯುಸಿ(ವಾಣಿಜ್ಯ) ವಿದ್ಯಾರ್ಥಿ ಸಾಕ್ಷತ್ ಚಿನ್ನದ ಪದಕ, ಆಂಗ್ಲ ಮಾಧ್ಯಮ ಶಾಲೆ 9ನೇ ತರಗತಿ ವಿದ್ಯಾರ್ಥಿ ರಕ್ಷಿತ್ ಬೆಳ್ಳಿ ಪದಕ ಪಡೆದರು.
ಓಪನ್ ಈವೆಂಟ್ಸ್ನಲ್ಲಿ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ನಂದಿನಿ ಜಿ. ಹಾಫ್ ಮ್ಯಾರಥಾನ್ನಲ್ಲಿ ಬೆಳ್ಳಿ ಪದಕ, ತೃತೀಯ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಪ್ರತೀಕ್ಷಾ 5 ಕಿ.ಮೀ. ಓಟದಲ್ಲಿ ಬೆಳ್ಳಿ ಪದಕ ಪಡೆದರು.