ಕೂಲಿ ಕಾರ್ಮಿಕ ನಾಪತ್ತೆ

missing
Published on

ಕಾಸರಗೋಡು: ಕುಂಬಳೆ ಸನಿಹದ ಪೇರಾಲ್ ಕಣ್ಣೂರು ನಿವಾಸಿ ರಾಮ ಎಂಬುವರ ಪುತ್ರ ಹರೀಶ್(42) ಎಂಬುವರು ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೂಲಿ ಕಾರ್ಮಿಕನಾಗಿರುವ ಹರೀಶ್ ಜುಲೈ 27ರಂದು ಮನೆಯಿಂದ ಕೆಲಸಕ್ಕೆ ಹೊರಟವರು ವಾಪಾಸು ಬಾರದ ಹಿನ್ನೆಲೆಯಲ್ಲಿ ಸಹೋದರ ಸತೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net