ಬಾಲ ಮಂದಿರದಿಂದ ಅಪ್ರಾಪ್ತರು ಎಸ್ಕೇಪ್

escape-web
Published on

ರಾಮನಗರ: ಬಾಲಮಂದಿರದಿಂದ ಮೂವರು ಬಾಲಕರು ನಾಪತ್ತೆಯಾಗಿರವ ಘಟನೆ ಚನ್ನಪಟ್ಟಣ ತಾಲೂಕಿನ‌ ವಂದಾರಗುಪ್ಪೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಂದಾರಗುಪ್ಪೆಯಲ್ಲಿರುವ ಬಾಲಕರ ಬಾಲ ಮಂದಿರದ ಮೂವರು ಇದೇ 14ರಂದು ಮುಖ ತೊಳೆಯಲು ಹೋಗುತ್ತೇವೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.

ಮುಖ ತೊಳೆಯುವ ನೆಪದಲ್ಲಿ ಸರ್ಕಾರಿ ಬಾಲಮಂದಿರದಿಂದ ಅಪ್ರಾಪ್ತರು ನಾಪತ್ತೆಯಾಗಿದ್ದಾರೆ. ಈ ವೇಳೆ ಸಿದ್ದರಾಜು ಎನ್ನುವ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಮೂವರು ಮಂಡ್ಯ ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಇದ್ದ ಈ ಮೂವರನ್ನುಸೆ.14ರಂದೇ ವಂದಾರಗುಪ್ಪೆ ಬಾಲ ಮಂದಿರಕ್ಕೆ ಸ್ಥಳಾಂತರಿಸಲಾಗಿತ್ತು.

ನಾಪತ್ರೆಯಾದ ಮೂವರು ಕ್ರಮವಾಗಿ 16, 13, 11 ವರ್ಷದ ಅಪ್ರಾಪ್ತರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮಕ್ಕಳನ್ನ ಹುಡುಕುತ್ತಿರೋ ಬಾಲಮಂದಿರ ಸಿಬ್ಬಂದಿ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net