ಮರ್ಮಾಂಗದ ಫೋಟೋ ಕಳಿಸದಿದ್ರೆ ಕೈ ಕೊಯ್ದುಕೊಳ್ತೀನಿ: ಕಾಮುಕನಿಗೆ ಹೆದರಿ ಎಡವಟ್ಟು ಮಾಡಿಕೊಂಡ ಅಪ್ರಾಪ್ತೆ!

Youth
Published on

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದ ಶಾಲಾ-ಕಾಲೇಜುಗಳು ಅನಿವಾರ್ಯವಾಗಿ ಆನ್​ಲೈನ್​ ಕ್ಲಾಸ್​ ಮೊರೆ ಹೋಗಬೇಕಾಯಿತು. ಆದರೆ, ಆನ್​ಲೈನ್​ ಕ್ಲಾಸ್​ ಭಾಗವಾಗಿ ಮಕ್ಕಳ ಕೈಯಲ್ಲಿ ಇಂದು ಸ್ಮಾರ್ಟ್​ಫೋನ್​ ಇರುವುದು ಮಡಿಲಲ್ಲಿ ಕೆಂಡ ಇಟ್ಟುಕೊಂಡಂತಾಗಿದೆ. ಆನ್​ಲೈನ್​ ಕ್ಲಾಸ್​ ಶುರುವಾದಗಿನಿಂದ ಒಂದಲ್ಲ ಒಂದು ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಂಥದ್ದೇ ಮತ್ತೊಂದು ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಕೆಲ ದುಷ್ಕರ್ಮಿಗಳು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಟಾರ್ಗೆಟ್​ ಮಾಡಿ ದುಷ್ಕೃತ್ಯ ಎಸಗುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಿಮ್ಮ ಮನೆಯ ಅಪ್ರಾಪ್ತ ಹೆಣ್ಣು ಮಕ್ಕಳು ಇನ್​ಸ್ಟಾಗ್ರಾಂ ಬಳಸುತ್ತಿದ್ದರೇ ಸ್ವಲ್ಪ ಜಾಗೃತರಾಗಿರುವುದು ಒಳಿತು. ಏಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಮುಂದೆ ಓದಿ....

ಮರ್ಮಾಂಗದ ಫೋಟೋ ಕಳುಹಿಸಲೇಬೇಕು. ಇಲ್ಲದಿದ್ದರೇ ನಾನು ಕೈ ಕುಯ್ದುಕೊಳ್ತಿನೆಂಬ ಕಾಮುಕನೊಬ್ಬನ ಬೆದರಿಕೆಗೆ ಹೆದರಿದ ಹುಡುಗಿ ಫೋಟೋ ಶೇರ್​ ಮಾಡಿರುವ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.

ಹುಡುಗಿಗೆ ಇನ್​ಸ್ಟಾಗ್ರಾಂನಲ್ಲಿ ಕಾರ್ತಿಕ್ ಎಂಬಾತ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದ. ಬಳಿಕ ಫ್ರೆಂಡ್​ಶಿಪ್​ ಹೆಸರಿನಲ್ಲಿ ಕಾಮುಕ ಕಾರ್ತಿಕ್, ಹುಡುಗಿಗೆ ಫೋರ್ನ್​ ಫೋಟೋ ಮತ್ತು ವಿಡಿಯೋಗಳನ್ನು ಅಪ್ರಾಪ್ತೆಗೆ ಕಳುಹಿಸುತ್ತಿದ್ದ. ಬಳಿಕ ಆಕೆಯ ಮರ್ಮಾಂಗದ ಫೋಟೋ ಕಳುಹಿಸುವಂತೆ ಕೇಳಿದ್ದ. ಒಂದು ವೇಳೆ ಫೋಟೋ ಕಳುಹಿಸದಿದ್ದರೇ ಕೈ ಕುಯ್ದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

ಇದೇ ಭಯದಲ್ಲಿ ಅಪ್ರಾಪ್ತೆ ಕಾರ್ತಿಕ್​ಗೆ ಮರ್ಮಾಂಗದ ಫೋಟೋ ಶೇರ್ ಮಾಡಿದ್ದಾಳೆ. ಇದಾದ ಬಳಿಕ ಆಕೆ ವರ್ತನೆಯ ಪಾಲಕರಿಗೆ ಅನುಮಾನ ಬಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಿ, ಪಶ್ಚಿಮ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net