ಎರಡು ಮೂರು ತಲೆಮಾರಿನವರು ಕೂತು ತಿನ್ನುವಷ್ಟು ಆಸ್ತಿ ಮಾಡಿದ್ದೇವೆಂದ ಕೈ ನಾಯಕನಿಗೆ ಸಚಿವ ಸುಧಾಕರ್​ ತಿರುಗೇಟು

Sudhakar-rameshkumar
Published on

ಕೋಲಾರ: ಕಾಂಗ್ರೆಸ್​ನ ಭ್ರಷ್ಟಾಚಾರಗಳನ್ನು ಸೊಗಸಾಗಿ ವರ್ಣಿಸಿರುವ ರಮೇಶ್​ ಕುಮಾರ್​ ಅವರೇ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಮತ ಕೇಳಲು ಹೋಗುತ್ತೀರಾ ಎಂದು ಸಚಿವ  ಕೆ. ಸುಧಾಕರ್​ ತಿರುಗೇಟು ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​, ನಾವು ಎರಡು ಮೂರು ತಲೆಮಾರಿನವರು ಕೂತು ತಿನ್ನುವಷ್ಟು ಮಾಡಿಕೊಂಡಿದ್ದೇವೆ ಎಂಬ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.

ಸದ್ಯ ಈ ವಿಡಿಯೋ ಶೇರ್​ ಮಾಡುವ ಮೂಲಕ ಟ್ವೀಟ್​ ಮಾಡಿರುವ ಸಚಿವ ಸುಧಾಕರ್​, ಕಾಂಗ್ರೆಸ್​ ಪಕ್ಷದ 60 ವರ್ಷಗಳ ಲೂಟ್​​ ಇಂಡಿಯಾ ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ವರ್ಣಿಸಿದ ಮೇಧಾವಿ ನಾಯಕರಿಗೆ ಅಭಿನಂದನೆಗಳು. ನಿಮ್ಮ ಪಕ್ಷದ ಹಿರಿಯ ನಾಯಕರೇ ಇಷ್ಟು ಪ್ರಾಮಾಣಿಕವಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಪ್ಪಿಕೊಂಡ ಮೇಲೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೀರಿ ಎಂದು ಹೇಳಿದ್ದಾರೆ.

ಕೋಲಾರಕ್ಕೆ ಸಿದ್ದರಾಮಯ್ಯ ಇದು ಖೆಡ್ಡಕ್ಕೆ ಬೀಳಿಸುವ ಯತ್ನ: ಕೋಲಾರದ ಕಾಂಗ್ರೇಸ್ ನ ಉತ್ತರ ಕುಮಾರ ಮಾತಿಗೆ ಸಿದ್ದರಾಮಯ್ಯ ಬರಲ್ಲ, ರಮೇಶ್​ ಕುಮಾರ್​ ಅವರನ್ನು ಸಿದ್ದರಾಮಯ್ಯನವರು ಸಾಕಷ್ಟು ನೋಡಿದ್ದಾರೆ ಎಂದು ಸಚಿವ ಸುಧಾಕರ್​ ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನ ಕರೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಅವರನ್ನು ಖೆಡ್ಡಕ್ಕೆ ಬೀಳಿಸುತ್ತಿರುವ ಯತ್ನ ಇದಾಗಿದ್ದು, ಕೋಲಾರ ಕಾಂಗ್ರೆಸ್​ ಶಾಸಕರಿಗೆ ಭಯ ಬಂದಿದೆ.ಅದಕ್ಕಾಗಿ ಅವರೆಲ್ಲಾ ಸೇರಿ ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ನಡೆ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಅವರು ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರಲ್ಲ ಎಂದು ಕೋಲಾರ ನಗರದ ಹೊರವಲಯದ ಕೋಗಿಲಹಳ್ಳಿ ಬಳಿ ಬಿಜೆಪಿಯ ಸಭೆಯಲ್ಲಿ ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net