ಬಿಜೆಪಿಯವರು ಮೀಸಲಾತಿ ವಿರೋಧಿಗಳು

Rajanna_Minister
Published on

ತುಮಕೂರು: ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. ಇದು ತೀರ್ಮಾನ ಆಗುವವರೆಗೆ ಯಾವುದೇ ಸರ್ಕಾರಿ ನೇಮಕಾತಿ ಮಾಡುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್​.ರಾಜಣ್ಣ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಒಳ ಮೀಸಲಾತಿ ಜಾರಿಯಾದಂತೆ ಕರ್ನಾಟಕದಲ್ಲಿ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಎರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ. ಎಲ್ಲ ಸಚಿವರಿಗೂ ವರದಿ ಸಾರಾಂಶದ ಒಂದೊಂದು ಪ್ರತಿ ಕೊಟ್ಟಿದ್ದಾರೆ. ಈ ವರದಿಯಲ್ಲಿ ಸುಮಾರು 8 ರಿಂದ -10 ಸಂಪುಟ ಇದೆ. ಇದನ್ನು ಓದಲು 3 ತಿಂಗಳು ಬೇಕು. ನಮಗೆ ಕೊಟ್ಟಿರುವುದು ಕೇವಲ ಸಾರಾಂಶದ ಪ್ರತಿ ಮಾತ್ರ ಎಂದರು.

ಜಾತಿ ಗಣತಿ ವರದಿ ಸಂಬಧಿಸಿದಂತೆ ಒಕ್ಕಲಿಗ ಸಮುದಾಯ ಸಭೆಗೆ ನನ್ನ ಅಭ್ಯಂತರ ಇಲ್ಲ. ಸಭೆ ಮಾಡಿ ಚರ್ಚೆ ಮಾಡಲಿ. ಅದರಲ್ಲಿ ಯಾವ ಅಂಶ ತಮಗಿಷ್ಟ ಆಗಿಲ್ಲದಿದ್ದರೆ ಆಕ್ಷೇಪ ವ್ಯಕ್ತಪಡಿಸಲಿ. ಅದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಬಿಜೆಪಿ ಯವರು ಮೀಸಲಾತಿ ವಿರೋಧಿಗಳು. ಅದಕ್ಕೆ ಜಾತಿ ಗಣತಿ ವಿರೋಧಿಸುತ್ತಾರೆ. 10 ವರ್ಷಗಳ ಹಳೇ ವರದಿ ಮತ್ತೊಮ್ಮೆ ಸಮೀೆ ಆಗಲಿ ಅನ್ನುವುದನ್ನು ಒಪ್ಪಬಹುದು. ಕೆ.ಎನ್​.ರಾಜಣ್ಣ ಸಹಕಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net