ತಲೆಹರಟೆ ಇದಾನೆ, ಹುಚ್ಚಾಸ್ಪತ್ರೆಗೆ ಸೇರಿಸಿ ಇವ್ನಾ

TVK_Tashildar
Published on

ತುಮಕೂರು: ಕೆಡಿಪಿ ಸಭೆಯಲ್ಲಿ ತುರುವೇಕೆರೆ ತಹಸೀಲ್ದಾರ್​ನನ್ನು ಸಹಕಾರ ಸಚಿವ ಕೆ.ಎನ್​.ರಾಜಣ್ಣ ತರಾಟೆಗೆ ತೆಗೆದುಕೊಂಡರು.

ಶಾಸಕ ಎಂ.ಟಿ.ಕೃಷ್ಣಪ್ಪ ಬಗರ್​ ಹುಕುಂ ಸಮಿತಿಯಲ್ಲಿ ಮಂಜೂರಾಗದೆ ಇರುವ ಭೂಮಿಯನ್ನು ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿರುವರಿಗೆ ಖಾತೆ ಮಾಡಿಕೊಟ್ಟಿರುವ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ವೇಳೆ ತಹಸೀಲ್ದಾರ್​ ಕರೆದು ಸ್ಪಷ್ಟನೆ ಕೇಳಲಾಗುತ್ತಿತ್ತು. ಈ ವೇಳೆ ಸಚಿವ ರಾಜಣ್ಣ ಅವರು, ಎಲ್ಲಾ ಅಧಿಕಾರಿಗಳಿಗೆ ಹೇಳ್ತೀನಿ ಅಕ್ರಮ ನಡೆದಿರುವ ಬಗ್ಗೆ ಮೊದಲು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.

ಮಾತು ಮುಂದುವರೆಸಿ ನಿನಗೆ ವಿಷಯ ಗೊತ್ತಾದ ತಕ್ಷಣ ಎಸಿ ಗಮನಕ್ಕೆ ತರಬೇಕು. ಮತ್ತೇ ತಪ್ಪಿತಸ್ಥರ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದಾಗ, ತುರುವೇಕೆರೆ ತಹಸೀಲ್ದಾರ್​ ಎಂ.ಇ.ಕುಂಇ ಅಹ್ಮದ್​ "ಸರ್​ ಅದು ಎಸಿ ಕೋರ್ಟ್​ನಲ್ಲಿದೆ' ಎನ್ನುತ್ತಿದ್ದಂತೆ ಕುಪಿತರಾದ ರಾಜಣ್ಣ "ಇವ್ನು ಯಾರೋ ತಲೆಹರಟೆ ಅವ್ನೇ. ಕಥೆ ಹೇಳ್ತಾ ಇದ್ದೀನಾ ನಾನು. ಮೊದಲು ನನ್ನ ಮಾತು ಕೇಳು ಎಂದು ಗದರಿದರು. ಆಗ ತಹಸೀಲ್ದಾರ್​ "ಇಲ್ಲ ಕರೆಕ್ಟ್​ ಇದ್ದೇನೆ' ಅನ್ನುತ್ತಿದ್ದಂತೆ ರಾಜಣ್ಣ ಸಿಟ್ಟು ನೆತ್ತಿಗೇರಿತು "ತಲೆಹರಟೆ ಕಣ್ರೀ ಇವ್ನು. ಹುಚ್ಚಾಸ್ಪತ್ರೆಗೆ ಸೇರಿಸಿ' ಎಂದರು. ಪರಿಸ್ಥಿತಿ ಅರಿತ ಎಂ.ಟಿ.ಕೃಷ್ಣಪ್ಪ ಇವ್ನದ್ದೇನು ತಪ್ಪಿಲ್ಲ, ತಹಸೀಲ್ದಾರ್​ ಒಳ್ಳೆಯ ಅಧಿಕಾರಿ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು.

ಸಚಿವರ ಮಾತಿನ ನಡುವೆಯೇ ಉತ್ತರ ಕೊಡಲು ಮುಂದಾದ ತಹಸೀಲ್ದಾರ್​ ವರ್ತನೆ ಕಂಡ ಪರಮೇಶ್ವರ್​, ಬಹಳ ಆತುರ ಬೀಳ್ತೀಯಾ, ಸಮಾಧಾನವಾಗಿ ಕೇಳಿಸಿಕೋಳ್ಳುವುದನ್ನು ಕಲಿತಿಕೊಳ್ಳುವಂತೆ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net