

ಒಕ್ಕಲಿಗ ಸ್ವಾಮೀಜಿಗೆ ಕಾನೂನು ಅನ್ವಯ ಆಗಲ್ವಾ ? |ಪೇಜಾವರ ಶ್ರೀಗಳ ಬಗ್ಗೆ ಮೌನ ಯಾಕೆ ? ಸಚಿವ ಪ್ರಿಯಾಂಕ್ ಖರ್ಗೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಿಜೆಪಿಯಲ್ಲಿ ಬಣ ರಾಜಕೀಯ ಜೋರುಗೊಂಡಿದೆ.ಒಬ್ಬರಿಗೊಬ್ಬರು ಬೈದಾಡಿಕೊಂಡು ಓಡಾಡುತ್ತಿರುವುದು ನೋಡಿದಾಗ ಕೇಸರಿಪಡೆಯಲ್ಲಿ ಹುಚ್ಚರ ಸಂತೆ ಶುರುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ನಿತ್ಯ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲï ಯತ್ನಾಳ, ಯತ್ನಾಳ ವಿರುದ್ಧ ವಿಜಯೇಂದ್ರ ಪಡೆಯವರು ದಾಳಿ ನಡೆಸುತ್ತಲೇ ಇದ್ದಾರೆ. ಹೀಗಾಗಿ ಬಿಜೆಪಿಯವರ ವಂಶವಾಹಿನಿಯ ಬಗ್ಗೆ ಡಿಎನ್‌ಎ ಪರೀಕ್ಷೆ ಮಾಡಿಸಲಿ, ಅವರು ಹೂಂ ಅಂದರೆ ನಾನೇ ಅವರೆಲ್ಲರಿಗೂ ಉಚಿತವಾಗಿ ಡಿಎನ್‌ಎ ಪರೀಕ್ಷೆ ಮಾಡಿಸುತ್ತೇನೆ ಎಂದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ನಾಯಕರಾದ ವಿಜಯೇಂದ್ರ,ರವಿಕುಮಾರ, ಆರ್.ಅಶೋಕ್, ಬಿ.ಸಿ.ಪಾಟೀಲï, ಸದಾನಂದಗೌಡ, ಮುನಿರತ್ನ, ರೇಣುಕಾಚಾರ್ಯ ಮೊದಲಾದವರು ಬೈದಾಡುತ್ತಿದ್ದಾರೆ. ಮೊದಲು ಅವರು ಸುಧಾರಿಸಲಿ, ವಿಜಯೇಂದ್ರ ಅವರಿಗೆ ಧೈರ್ಯವಿದ್ದರೆ ಮೊದಲು ಯತ್ನಾಳ ಹಾಗೂ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಸವಾಲು ಹಾಕಿದರು.
ಒಕ್ಕಲಿಗರ ಸ್ವಾಮೀಜಿಗಳಿಗೆ ಅಥವಾ ಕಾವಿ ಧರಿಸಿದ ಮಾತ್ರಕ್ಕೆ ಕಾನೂನು ಅನ್ವಯ ಆಗುವುದಿಲ್ಲವೇನು, ಅವರಿಗೆ ಸಂವಿಧಾನ ಪಾಲಿಸಬೇಕು ಎಂಬುದು ಗೊತ್ತಿಲ್ಲವೇನು ಎಂದು ಪ್ರಶ್ನಿಸಿದರು. ಈ ವಿಷಯದಲ್ಲಿ ವಿಪಕ್ಷ ನಾಯಕ ಆರ್.ಅಶೋಕ ಇಲ್ಲದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಖುದ್ದು ಸ್ವಾಮೀಜಿ ಅವರೇ ವಿಷಾದ ವ್ಯಕ್ತಪಡಿಸಿz್ದÁರೆ. ಆದರೆ, ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುವ ಮೂಲಕ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಅವರ ಹೇಳಿಕೆ ಸರಿಯಾ ಎಂದು ಸಷ್ಟಪಡಿಸಿ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂ.ವೈ.ಪಾಟೀಲ್,ಅಲ್ಲಮಪ್ರಭು ಪಾಟೀಲï, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ ಮೊದಲಾದವರಿದ್ದರು.
ಮಿಸ್ಟರ್ ವಿಜಯೇಂದ್ರ ಎಲ್ಲಿದಿರಿ?
ಸಂವಿಧಾನ ನಮಗೆ ಗೌರವ ನೀಡುವಂತೆ ಇಲ್ಲ ಎಂದಿರುವ ಪೇಜಾವರ ಶ್ರೀ ಹೇಳಿಕೆಗೆ ಬಗ್ಗೆ ಬಿಜೆಪಿ ಮೌನತಾಳಿದೆ. ಆದರೆ, ಒಕ್ಕಲಿಕ ಸ್ವಾಮೀಜಿ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರದೇ ಪP್ಷÀದ ಶಾಸಕ ಯತ್ನಾಳರು, ಬಸವಣ್ಣನವರನ್ನು ಹೇಡಿ ಎಂದರೂ ಸುಮ್ಮನಿದ್ದಾರೆ. ಬಸವಣ್ಣನವರ ಹೆಸರು ಹೇಳಿ ಮತ ಪಡೆದುಕೊಳ್ಳುವ ನಿಮಗೆ ಈಗ ಬಸವಣ್ಣ ಬೇಡವಾದರೆ ? ಎಲ್ಲಿದಿರಿ ಮಿಸ್ಟರ್ ವಿಜಯೇಂದ್ರ ಎಂದು ಪ್ರಶ್ನಿಸುವ ಮೂಲಕ ಪ್ರಿಯಾಂಕ್ ಗುಡುಗಿದರು. ಬಸವಣ್ಣ, ಸಂವಿಧಾನ ಮತ್ತು ಸಮಾನತೆ ಅಂದರೆ ಬಿಜೆಪಿಯವರಿಗೆ ಅಲರ್ಜಿ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಅವರ ಇತಿಹಾಸವೇ ಗೊತ್ತಿಲ್ಲ, ಈಗ ರಜಾಕಾರರ ಇತಿಹಾಸ ಹೇಳಲು ಹೊರಟಿz್ದÁರೆ, ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ರಜಾಕಾರರ ಇತಿಹಾಸ ಓದಲು ಆರಂಭಿಸಿದ್ದಾರೆ ಎಂದು ಛೇಡಿಸಿದರು.
ಅಂಗವಿಕಲರ ಅನುದಾನ ಕಡಿತಗೊಂಡಿಲ್ಲ
ಸರ್ಕಾರವು ಅಂಗವಿಕಲರ ಕ್ಷೇಮಕ್ಕಾಗಿ ನೀಡುವ ಅನುದಾನದಲ್ಲಿ ಶೇ. ೮೦ ರಷ್ಟು ಕಡಿತಗೊಳಿಸಿದೆ ಎಂದು ವಿಪಕ್ಷದವರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಅನುದಾನ ಕಡಿತಗೊಂಡಿಲ್ಲ. ಎಲ್ಲವನ್ನು ತಂದು ಯಾಕೆ ಗ್ಯಾರಂಟಿ ಮೇಲೆ ಬಿಜೆಪಿಯವರು ಹಾಕುತ್ತಾರೋ ತಿಳಿಯದಾಗಿದೆ ಎಂದು ಸಚಿವ ಪ್ರಿಯಾಂಕ್ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ. ಅದರಷ್ಟಕ್ಕೆ ಅವು ನಡೆದಿವೆ. ಅಂಗವಿಕಲರ ಅನುದಾನ,ನಮ್ಮ ಇಲಾಖೆ ಸೇರಿ ಎಲ್ಲ ಇಲಾಖೆಗಳ ಅನುದಾನ ಹೆಚ್ಚಿಸಲಾಗಿದೆ. ಆಯಾ ಇಲಾಖೆಗಳ ಕ್ರಿಯಾ ಯೋಜನೆಯಂತೆ ಹಣ ಹಂಚಿಕೆಯಾಗಿದೆ ಎಂದರು.