ಪ್ರೊ.ಕೆ.ಎಸ್​.ನಾರಾಯಣಾಚಾರ್ಯರ ಮನೆಗೆ ತೆರಳಿ ಸಾಂತ್ವನ ಹೇಳಿದ್ರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಐಟಿ-ಬಿಟಿ ಸಚಿವ ಅಶ್ವತ್ಥನಾರಾಯಣ...

Prof KSN
Published on

ಬೆಂಗಳೂರು: ಇತ್ತೀಚೆಗೆ ಅಗಲಿದ ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ಮನೆಗೆ ಇಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕ ಮುನಿರತ್ನ ಮುಂತಾದವರು ತೆರಳಿ ಸಾಂತ್ವನ ಹೇಳಿದರು.

ಬೆಂಗಳೂರಿನಲ್ಲಿರುವ ನಿವಾಸಕ್ಕೆ ತೆರಳಿದ ಇವರು, ಪ್ರೊ.ಕೆ.ಎಸ್. ನಾರಾಯಣಾಚಾರ್ಯ ಅವರ ಪತ್ನಿ ಕಮಲಮ್ಮ, ಪುತ್ರ ರಂಗರಾಮಾನುಜನ್ ಅವರೊಂದಿಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು. ಪ್ರಲ್ಹಾದ್ ಜೋಶಿ, ಅಶ್ವತ್ಥನಾರಾಯಣ್​ ಮುಂತಾದವರಿಗೆ ರಂಗರಾಮಾನುಜನ್ ಅವರು ನಾರಾಯಣಾಚಾರ್ಯರ ಕೃತಿಗಳನ್ನು ನೀಡಿದರು.

ನಾರಾಯಣಾಚಾರ್ಯರ ಪಾಂಡಿತ್ಯ, ವಿಷಯಪರಿಣತಿ ಇತ್ಯಾದಿಗಳ ಕುರಿತು ಪ್ರಸ್ತಾಪಿಸಿದ ಸಚಿವರು-ಶಾಸಕರು, ಧಾರ್ಮಿಕ-ಪೌರಾಣಿಕ-ಐತಿಹಾಸಿಕ ವಿಚಾರಗಳಲ್ಲದೆ ಪ್ರಚಲಿತ ವಿಷಯಗಳನ್ನೂ ನಾರಾಯಣಾಚಾರ್ಯರು ಪ್ರಖರವಾಗಿ ಮಂಡಿಸುತ್ತಿದ್ದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net