

ಹಾವೇರಿ: ಲಾರಿ-ಬೈಕ್ ಭೀಕರ ಅಪಘಾತದಲ್ಲಿ ತಂದೆಯ ಕಣ್ಣೆದುರೇ ಪುತ್ರಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಲಾರಿಯ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಹಾವೇರಿ ಜಿಲ್ಲೆಯ ಗುತ್ತಲ ತಾಂಡಾ ಬಳಿ ಇಂದು ಈ ಅಪಘಾತ ಸಂಭವಿಸಿದೆ.
ಹಾವೇರಿಯ ದೇವಗಿರಿಯ ಮಾಲಾ ಕೋಟೆಪ್ಪ ತಡಸದ ಎಂಬಾಕೆ ಸಾವಿಗೀಡಾದ ಯುವತಿ. ಈಕೆ ತನ್ನ ತಂದೆಯ ಜತೆ ಬೈಕ್ನಲ್ಲಿ ಸಾಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಯುವತಿ ಸ್ಥಳದಲ್ಲೇ ಸಾವಿಗೀಡಾದರೆ, ಈಕೆಯ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಣ್ಣೆದುರೇ ಸಾವಿಗೀಡಾದ ಮಗಳನ್ನು ನೋಡಿದ ತಂದೆಯ ಆಕ್ರಂದ ನೆರೆದಿದ್ದ ಜನರು ಮರುಕಪಡುವಂತಿತ್ತು. ಗಾಯಗೊಂಡಿರುವ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಓಡಿ ಹೋಗಿ ಲಾರಿ ಚಾಲಕನನ್ನು ಹಿಡಿದರೂ ಆತ ತಪ್ಪಿಸಿಕೊಂಡು ಲಾರಿ ಬಿಟ್ಟು ಓಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.