ಪರಂ ಗೈರು, ಡಿಕೆ ಬಣ ಹಾಜರು

Rajanath_DKShi
Published on

ತುಮಕೂರು: ಸಿದ್ದಗಂಗಾ ಶ್ರೀಗಳ ಗುರವಂದನ ಕಾರ್ಯಕ್ರಮವು ರಾಜಕೀಯ ಕೇಂದ್ರಿತ ಚಟುವಟಿಕೆಗಳಿಗೆ ಸಾಯಾಯಿತು. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಜತೆ ರಾಜ್ಯ ಕಾಂಗ್ರೆಸ್​ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್​ ಭಾಗಿಯಾಗಿದ್ದು ವಿಶೇಷವೆನಿಸಿತ್ತು.

ಶ್ರೀಮಠದ ಪರಮ ಭಕ್ತರಲ್ಲೊಬ್ಬರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಗೈರು ಎದ್ದು ಕಾಣುತ್ತಿತ್ತು. ಇನ್ನು ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದ ಸಹಕಾರ ಸಚಿವ ಕೆ.ಎನ್​.ರಾಜಣ್ಣ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸದೆ ಹಾಗೇ ತೆರಳಿದರು.

ಡಿಸಿಎಂ ಜತೆ ಗುಬ್ಬಿ ಶಾಸಕ ಎಸ್​.ಆರ್​.ಶ್ರೀನಿವಾಸ್​, ಕುಣಿಗಲ್​ ಶಾಸಕ ಡಾ.ಎಚ್​.ಡಿ.ರಂಗನಾಥ್​, ನೆಲಮಂಗಲ ಶಾಸಕ ಎನ್​.ಶ್ರೀನಿವಾಸಯ್ಯ ಹಾಜರಾದರು. ಕೆಪಿಸಿಸಿ ಅಧ್ಯಕ್ಷರು ಆದ ಡಿಸಿಎಂ ಡಿ.ಕೆ.ಶಿವಕುಮಾರ್​ ಜತೆ ಜಿಲ್ಲೆಯ ಹಿರಿಯ ಸಚಿವರಿಬ್ಬರು ವೇದಿಕೆ ಹಂಚಿಕೊಳ್ಳದೆ ದೂರ ಉಳಿದಿದ್ದು ಸಾರ್ವಜನಿಕವಲಯದಲ್ಲಿ "ಗುಸುಗುಸು' ಚರ್ಚೆಗೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net