ಪರಮೇಶ್ವರ್​ ಕಚೇರಿ ಕಾರ್ಯಾರಂಭ

Param_Office
Published on

ಎಂಜಿ ಸ್ಟೇಡಿಯಂನಲ್ಲಿ ಪೇ ಆ್ಯಂಡ್​ ಪ್ಲೇ ಜಾರಿ ಮಾಡಿ

ತುಮಕೂರು: ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿನ ನೂತನ ಕಾರ್ಯಾಲಯವನ್ನು ಕರ್ನಾಟಕ ಅಥ್ಲೆಟಿಕ್​ ಅಸೋಸಿಯೇಷನ್​ (ಕೆಎಎ) ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಸೋಮವಾರ ಉದ್ಘಾಟಿಸಿದರು.

ರಾಹುಕಾಲ ಮುಗಿದ ಬಳಿಕ ಜಿ.ಪರಮೇಶ್ವರ್​ ಕ್ರೀಡಾಂಗಣದ ಮೊದಲ ಅಂತಸ್ತಿನಲ್ಲಿನ ನವೀಕೃತ ಕೆಎಎ ಅಧ್ಯಕ್ಷರ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸ್ಮಾರ್ಟ್​ಸಿಟಿ ಯೋಜನೆ ಅಡಿ 54.56 ಕೋ.ರೂ., ಹಾಗೂ ಸಿಂಥೆಟಿಕ್​ ಟ್ರಾ$್ಯಕ್​ ಅನ್ನು 4 ಕೋ.ರೂ., ವೆಚ್ಚದಲ್ಲಿ ಅಳವಡಿಸಿ ನಿರ್ಮಿಸಿರುವ ಸುಸಜ್ಜಿತ ಕ್ರೀಡಾಂಗಣ ನಿರ್ವಹಣೆಗೆ ಪೇ ಆ್ಯಂಡ್​ ಪ್ಲೇ (ಕ್ರೀಡಾಂಗಣ ಬಳಕೆ ನೀತಿ) ಯೋಜನೆ ಜಾರಿ ತರುವಂತೆ ಸಲಹೆ ನೀಡಿದರು.

ವಾಯುವಿಹಾರಿಗಳಿಗು ಕ್ರೀಡಾಂಗಣ ಬಳಕೆ ನೀತಿ ಅನ್ವಯವಾಗಲಿದ್ದು ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡಚಣೆ ಆಗದಂತೆ ಪ್ರತ್ಯೇಕವಾಗಿ ನಿರ್ಮಿಸಿರುವ ವಾಕಿಂಕ್​ ಪಾಥ್​ ಬಳಸುವಂತೆ ಕಡ್ಡಾಯಪಡಿಸಿ. ಕ್ರೀಡಾಂಗಣವನ್ನು ನಿರ್ವಹಣೆ ಹೊರೆಯಾಗದಂತೆ ನೋಡಿಕೊಳ್ಳುವುದು ಕ್ರೀಡಾ ಇಲಾಖೆ ಜವಾಬ್ದಾರಿ ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ, ಮಾಜಿ ಉಪಮೇಯರ್​ ರೂಪಶ್ರೀ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net