

ತುಮಕೂರು: ಮುಂದಿನ ದಿನದಲ್ಲಿ ಪರಮೇಶ್ವರ್ ಅವರಿಗೆ ಇನ್ನೂ ಉನ್ನತ ಸ್ಥಾನ ಸಿಕ್ಕೆ ಸಿಗುತ್ತದೆ ಎಂಬ ಸಿಎಂ ಆಪ್ತರಾದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ ಹೊಸ ಚರ್ಚೆಗೆ ನಾಂದಿಯಾಡಿದೆ.
ನಗರದ ಟೌನ್ ಹಾಲ್ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಪರಮೇಶ್ವರ್ ಅವರಿಗೆ ಇನ್ನು ಉನ್ನತವಾದ ಸ್ಥಾನ ಸಿಗಲಿ. ಅವರು ಸೌಮ್ಯ ಸ್ವಭಾವದವರು. ಇವತ್ತು ಅವರು ಬಹಳ ಗಟ್ಟಿಯಾಗಿ ಮಾತನಾಡಿದ್ದು, ನಾನು ಎಂದು ನೋಡಿರಲಿಲ್ಲ ಎಂದರು.
ಅವ್ರ ಸ್ವಭಾವ ಸೌಮ್ಯ ಆದರೆ ಅವರು ತೆಗೆದುಕೊಳ್ಳುವ ನಿರ್ಣಯ ಕಠಿಣ. ಹಾಗಾಗಿಯೇ ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು.