ಪರಂಗೆ ಕೊಬ್ಬರಿ ಹಾರ, ಬೆಳ್ಳಿಕಿರೀಟ

Param_Birthday_03
Published on

ತುಮಕೂರು: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್​ ನೇತೃತ್ವದಲ್ಲಿ ಸಚಿವ ಡಾ.ಜಿ.ಪರಮೇಶ್ವರ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹೆಗ್ಗೆರೆ ಸರ್ಕಲ್​ನಲ್ಲಿ ಪಟಾಕಿ ಸಿಡಿಸಿ ಪರಮೇಶ್ವರ್​ರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೃಹತ್​ ಕ್ರೇನ್​ ಮೂಲಕ 50 ಸಾವಿರ ಮೌಲ್ಯದ ಬೃಹತ್​ ಕೊಬ್ಬರಿ ಹಾರ ಹಾಕಿ ಅಭಿನಂದಿಸಲಾಯಿತು.

74 ಕೆಜಿ ತೂಕದ ಕೇಕ್​: 73ನೇ ವಸಂತ ತುಂಬಿ 74ನೇ ವರ್ಷಕ್ಕೆ ಕಾಲಿಡುತ್ತಿರುವ ಪರಮೇಶ್ವರ್​ ಜನ್ಮದಿನದ ಅಂಗವಾಗಿ 74 ಕೆಜಿ ಬೃಹತ್​ ಕೇಕ್​ ಅನ್ನು ನಿರ್ಮಿಸಿದ್ದು ಗೌರಿಶಂಕರ್​, ಪಾಲನೇತ್ರಯ್ಯ, ದೇವರಾಜು ಸೇರಿದಂತೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಕತ್ತರಿಸಲಾಯಿತು. ಈ ವೇಳೆ ಪರಂಗೆ 4 ಲ್ಷ ಮೌಲ್ಯದ ಬೆಳ್ಳಿ ಕಿರೀಟ ತೊಡಿಸಿ ಕತ್ತಿ ನೀಡಿ ಗೌರಿಶಂಕರ್​ ಸನ್ಮಾನಿಸಿದರು.

ಈ ವೇಳೆ ಸಚಿವ ಪರಮೇಶ್ವರ್​ ಮಾತನಾಡಿ, ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಸದಾಚಿರರುಣಿ ,ನೀವು ಈ ಬಾರಿ ಸ್ವಲ್ಪ ಯಾಮಾರಿದ್ದೀರಾ ಇಲ್ಲದಿದ್ದರೆ ಗೌರಿಶಂಕರ್​ ಶಾಸಕರಾಗುತ್ತಿದ್ದರು. ಮುಂದಿನ ಬಾರಿ ಯಾಮಾರಬೇಡಿ ಎಂದು ಮನವಿಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net