ಲೇಟ್ ಲತೀಫ್ ಗೆ ಗೆಟ್ ಹೌಟ್ ಶಿಕ್ಷೆ

ST_DM officer
Published on

ತುಮಕೂರು: ಈ ಸಾಲಿನ 3ನೇ ತೆಮಾಸಿಕ ಕೆಡಿಪಿ ಸಭೆ ನಿಗದಿತ ಸಮಯಕ್ಕೆ ಸರಿಯಾಗಿ ಸೋಮವಾರ ಬೆಳಗ್ಗೆ ಆರಂಭವಾಯಿತು. ಸಚಿವರಾದಿಯಾಗಿ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಯಲ್ಲಿ ಹಾಜರಿದ್ದರು.

ಆದರೆ, ಗ್ರಹಚಾರ ಕೆಟ್ಟಿ ಸಭೆಗೆ 1 ಗಂಟೆ ತಡವಾಗಿ ಬಂದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್​ರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ "ಗೆಟ್​ಹೌಟ್​' ಅಂತಾ ಸಭಾಂಗಣದಿಂದಲೇ ಹೊರಕಳುಹಿಸಿದ ಪ್ರಸಂಗ ನಡೆಯಿತು.

ಯಾರ್ರೀ ಅದು ಫೈಲ್ ಹಿಡಿದು ಬಂದಿದ್ದು, ಆಫೀಸರಾ, ಯಾವ ಡಿಪಾರ್ಟ್​ಮೆಂಟ್​ ಎಂದು ಪ್ರಶ್ನಿಸಿದ ಪರಮೇಶ್ವರ್​, ಇಷ್ಟು ಲೇಟಾಗಿ ಬಂದಿದ್ದೀಯಾ ಗೆಟ್​ ಹೌಟ್​. ಇನ್ನೂ ನಿಂತಿದ್ದೀಯಾ. ಅವ್ನಿಗೆ ನೋಟೀಸ್​ ಕೊಡ್ರಿ. ಬಾಗಿಲು ಬಂದ್​ ಮಾಡಿ ತಡವಾಗಿ ಬರುವ ಅಧಿಕಾರಿಗಳನ್ನು ಒಳಗೆ ಬಿಡಬೇಡ್ರಿ ಎಂದು ಖಡಕ್​ ವಾರ್ನಿಂಗ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net