ಸಂತೋಷ್ ನಿವಾಸಕ್ಕೆ ಸಚಿವ ನಿರಾಣಿ ‌ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

pic nirani
Published on

ಬೆಳಗಾವಿ: ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ ಮನೆಗೆ ಸಚಿವ ಮುರುಗೇಶ ನಿರಾಣಿ ‌ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ‌ಹೇಳಿದರು.

ಇದೇ ವೇಳೆ, ಪತ್ನಿ ಜಯಶ್ರೀ ಹಾಗೂ ತಾಯಿ ಪಾರ್ವತಿಗೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ‌ಪರಿಹಾರ ನೀಡಿದರು. ಈ ವೇಳೆ ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಕುಟುಂಬಸ್ಥರು ಕೋರಿದರು.

ಈ ಕುರಿತು ಮನವಿ ಮಾಡಿದ್ದೇವೆ. ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂತೋಷ ಪಾಟೀಲ್​​ಗೆ ಬರಬೇಕಿದ್ದ ಕಾಮಗಾರಿಯ ಬಿಲ್ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಕ್ರಮವಹಿಸುವುದಾಗಿ ನಿರಾಣಿ‌ ಭರವಸೆ ನೀಡಿದರು.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಇಂದು ಮಾಧ್ಯಮಗೋಷ್ಟಿ ನಡೆಸಿದ ಈಶ್ವರಪ್ಪ ನಾಳೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇನ್ನೊಂದೆಡೆ, ಆರೋಪಿಗಳ ಬಂಧನವಾಗಬೇಕು ಎಂದು ಸಂತೋಷ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಆಹೋರಾತ್ರಿ ಧರಣಿ ಮುಂದುವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net