

ಕುಂದಗೋಳ: ಮಳೆಯಿಂದ ಹಾನಿಗೊಳಗಾದ ಕುಂದಗೋಳ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಶುಕ್ರವಾರ ಕಾರ್ವಿುಕ ಸಚಿವ ಸಂತೋಷ ಲಾಡ್ ಭೇಟಿ ನೀಡಿದರು.
ಸಂಶಿಯಲ್ಲಿ ಮಳೆಯಿಂದ ಹಾನಿಗೊಳಗಾದ ಮುದುಕವ್ವ ಗುಡುದೂರ ಎಂಬುವರ ಮನೆ ವೀಕ್ಷಿಸುವಾಗ ಅವರ ಮಗಳಾದ ರೂಪಾ ಎಂಬುವರು ಬಡತನದಿಂದಾಗಿ ಶಿಕ್ಷಣ ಮೊಟಕುಗೊಳಿಸಿದ್ದನ್ನು ತಿಳಿದುಕೊಂಡ ಸಚಿವರು, ಮತ್ತೆ ಶಿಕ್ಷಣ ಮುಂದುವರಿಸುವಂತೆ ಆಕೆಗೆ ತಿಳಿಸಿದರು.
ಕೂಡಲೇ ಸರ್ಕಾರಿ ಪದವಿ ಕಾಲೇಜ್ ಪ್ರಾಚಾರ್ಯರಿಗೆ ಕರೆ ಮಾಡಿ, ವಿದ್ಯಾರ್ಥಿನಿಗೆ ನಿಮ್ಮ ಕಾಲೇಜ್ನಲ್ಲಿ ಪ್ರವೇಶ ನೀಡಿ, ಆಕೆಯ ಪ್ರವೇಶ ಶುಲ್ಕ 7000 ರೂ. ಗಳನ್ನು ನಾನು ಭರಿಸುತ್ತೇನೆ ಎಂದು ಹೇಳಿ ವಿದ್ಯಾರ್ಥಿನಿಯಲ್ಲಿ ಆತ್ಮಸ್ಥೈರ್ಯ ತುಂಬಿದರು.