

ತುಮಕೂರು: ಪ್ರಧಾನ ಮಂತ್ರಿ ದಿನಾ ರೈಲು ಬಿಡುತ್ತಾರೆ. ಇವತ್ತು ಒಂದೇ ದಿನ ಅಲ್ಲ. ಅಧಿಕಾರಕ್ಕೆ ಬಂದ ನೂರೇ ದಿನದಲ್ಲಿ ಕಪು$್ಪಹಣ ತಂದು ಎಲ್ಲರಿಗೂ 15 ಲಕ್ಷ ರೂ., ಕೊಡುವುದಾಗಿ ಹೇಳಿ ರೈಲು ಬಿಟ್ರಲ್ಲಾ, ಮತ್ತೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಅಂತಾ ರೈಲು ಬಿಟ್ರಲ್ಲಾ, ಬಜೆಟ್ನಲ್ಲಿ ಭದ್ರಾ ಮೇಲ್ದಂಡೆಗೆ 5 ಸಾವಿರ ಕೋಟಿ ಹಣ ಘೋಷಿಸಿದ್ದು ಈವರೆಗೆ ಒಂದು ನಯಾ ಪೈಸೆ ಕೊಟ್ಟಿಲ್ಲ, ಅದೆಲ್ಲಾ ರೈಲು ಬಿಟ್ಟಿಲ್ಲವಾ. ಮೋದಿ ದಿನಕ್ಕೊಂದು ರೈಲುಬಿಡ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ರೈಲು ಬಿಡುವುದೇನ್ರಿ ಪ್ರಧಾನ ಮಂತ್ರಿ ದಿನವು ರೈಲು ಬಿಡುತ್ತಾರೆ ಎಂದರು.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ನಮ್ಮ ಜಿಲ್ಲೆಗೆ ಹೆಚ್ಚು ಅನುದಾನ ತರುತ್ತಿದ್ದು ಸಮರ್ಪಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ನನ್ನ ಕ್ಷೇತ್ರ ಒಂದಕ್ಕೆ 29 ಕೋಟಿ ರೂ., ಅನುದಾನ ಕೊಟ್ಟಿದ್ದಾರೆ. ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದ ಜಿ.ಎಸ್.ಬಸವರಾಜು ನಮ್ಮ ಕ್ಷೇತ್ರಕ್ಕೆ ಸಾಕಷ್ಟು ನೆರವು ನೀಡಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಸೋಮಣ್ಣಗೆ ಅಭಿನಂದನೆ ಸಲ್ಲಿಸುತ್ತೇನೆ. ಕೆ.ಎನ್.ರಾಜಣ್ಣ ಸಹಕಾರ ಸಚಿವ