ಸುರೇಶಗೌಡ, ಬಸವರಾಜು ನಮ್ಮ ಜತೆ ಕಾಣಿಸಿಕೊಂಡಾಕ್ಷಣ ಕಾಂಗ್ರೆಸ್ ಸೇರ್ತಾರೆ ಅಂತಾನಾ ಎಂದ ಸಚಿವ ರಾಜಣ್ಣ

KNR_GSB
Published on

ತುಮಕೂರು: ಬಿಜೆಪಿ ಶಾಸಕರಾದ ಸುರೇಶ್ ಗೌಡ, ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ನಮ್ಮ ಜತೆ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನುವ ಕಾರಣಕ್ಕೆ ಕಾಂಗ್ರೆಸ್‌ಗೆ ಬರ್ತಾರೆ ಅಂತ ಊಹೆ ಮಾಡೋಕೆ ಆಗುತ್ತಾ? ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪತ್ರಕರ್ತರನ್ನೇ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಸಹಕಾರ ಸಂಘಗಳ ಅಭಿನಂದನಾ ಸಮಿತಿ ವತಿಯಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಬೇರೆ ಪಕ್ಷದವರು ನಮ್ಮ ಜತೆ ಕಾಣಿಸಿಕೊಂಡಾಕ್ಷಣ ಕಾಂಗ್ರೆಸ್ ಸೇರ್ತಾರೆ ಅಂತ ಅಲ್ಲ. ಅದೆಲ್ಲ ಏನು ಇಲ್ಲ, ರಾಜಕೀಯ ನಿಂತ ನೀರಲ್ಲ. ನಾಳೆ ಬೆಳಗ್ಗೆ ನಾನು ದಳಕ್ಕೆ ಹೋಗ್ಬೇಕು ಅಂತ ಯೋಚನೆ ಮಾಡ್ತೀದಿನಿ. ಹಾಗಾದರೆ, ನೀವು ಅದನ್ನೇ ಜೋರಾಗಿ ಹಾಕಿ ಎಂದು ತಮ್ಮದೇ ಶೈಲಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net