ಆರ್​ಎಂಸಿ ಯಾರ್ಡ್​ನಲ್ಲಿ ಕೆ.ಗೋಪಾಲಯ್ಯ ಪ್ರಚಾರ

K Gopalaiah
Published on

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡ್​ನಲ್ಲಿರುವ ಆರ್​ಎಂಸಿ ಯಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಗುರುವಾರ ಮಾರುಕಟ್ಟೆ ವರ್ತಕರು ಹಾಗೂ ಕೂಲಿ ಕಾರ್ವಿುಕರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.

ಮಾರುಕಟ್ಟೆ ತೆರವು ಮಾಡಬೇಕೆಂದು ಪ್ರಸ್ತಾಪ ಬಂದಾಗ ನಾನು ಮುಂದೆ ನಿಂತು ಹೆದ್ದಾರಿ ತಡೆ ಮಾಡಿ ನಿಮ್ಮೆಲ್ಲರ ಅಂಗಡಿ ಮುಗ್ಗಟ್ಟುಗಳು ತೆರವು ಮಾಡದಂತೆ ಹೋರಾಟ ಮಾಡಿ ಉಳಿಸಿರುವೆ ಎಂದು ಹೇಳಿದರು.

ನಿಮ್ಮ ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ಕ್ಷೇತ್ರದಲ್ಲಿ ಶಾಲೆಗಳನ್ನು ಅಭಿವೃದ್ಧಿ ಮಾಡಿ ಉಚಿತ ಶಿಕ್ಷಣ ನೀಡುವಲ್ಲಿ ನಾನು ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ಶ್ರಮಿಸಿದ್ದೇವೆ. ಕರೊನಾ ಸಂಕಷ್ಟದಲ್ಲಿ ಫುಡ್ ಕಿಟ್, ಔಷಧ ಕಿಟ್, ಆಕ್ಸಿಜನ್ ಸೇರಿ ಹಲವು ರೀತಿಯ ಸಹಾಯ ಮಾಡಿದ್ದೇನೆ. ಬುಧವಾರ (ಮೇ 10) ತಾವೆಲ್ಲರೂ ತಪ್ಪದೆ ಭಾರತೀಯ ಜನತಾ ಪಕ್ಷದ ಚಿನ್ಹೆ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ನನ್ನನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಮಾಡಲಿಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ನರೇಂದ್ರಬಾಬು, ಬಿಬಿಎಂಪಿ ಮಾಜಿ ಸದಸ್ಯ ಎಂ ಮಹದೇವ್, ವಾರ್ಡ್ ಅಧ್ಯಕ್ಷ ಡಾ. ನಾಗೇಂದ್ರ, ಸ್ಥಳೀಯ ಮುಖಂಡರಾದ ಮಲ್ಲಪ್ಪ, ಉಮಾಪತಿ ನಾಯ್ಡು, ಸಾಯಿ ರೆಡ್ಡಿ, ಪುಟ್ಟಸ್ವಾಮಿ, ರಾಘವೇಂದ್ರ, ಸುರೇಶ್ ಸೇರಿ ಆರ್​ಎಂಸಿ ಯಾರ್ಡ್​ನ ಹಲವು ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net