More

    ಕೋವಿಡ್, ಪ್ರವಾಹದ ಸಮಯದಲ್ಲಿ ನೆನಪಾಗಲಿಲ್ಲವೇ?: ಶ್ರೀರಂಗಪಟ್ಟಣ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ರಾಜ್ಯದಲ್ಲಿ ಕೋವಿಡ್ ಹಾಗೂ ಪ್ರವಾಹದ ಸಮಯ ಎದುರಾದಾಗ ಬಾರದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಚುನಾವಣೆ ಹತ್ತಿರವಾದ ಮೇಲೆ ನೆನಪಾಗಿರುವುದು ವಿಪರ್ಯಾಸ ಎಂದು ಶ್ರೀರಂಗಪಟ್ಟಣ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
    ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಕೊತ್ತತ್ತಿ ಭಾಗದಲ್ಲಿ ಮತಯಾಚನೆ ಮಾಡಿದ ಅವರು, ರಾಷ್ಟ್ರೀಯ ಪಕ್ಷಗಳ ಹಿರಿಯ ಮುಖಂಡರು ರಾಜ್ಯಕ್ಕೆ ನಾ ಮುಂದು, ತಾ ಮುಂದು ಎಂಬಂತೆ ಆಗಮಿಸುತ್ತಿದ್ದಾರೆ. ರೈತರ ಸರಣಿ ಆತ್ಮಹತ್ಯೆಯಾದಾಗ ಇವರೆಲ್ಲರೂ ಎಲ್ಲಿದ್ದರು. ಆ ವೇಳೆ ಅವರಿಗೆ ಮಂಡ್ಯ ಜಿಲ್ಲೆಯ ನೆನಪಾಗಲಿಲ್ಲವೇ?. ಇವರಿಗೆ ರಾಜ್ಯದ ಜನತೆಯ ಹಿತಬೇಕಿಲ್ಲ. ಮತವಷ್ಟೇ ಬೇಕಾಗಿರುವುದು. ಇಂದು ಚುನಾವಣಾ ಗಿಮಿಕ್‌ಗಾಗಿ ಆಗಮಿಸುತ್ತಿದ್ದಾರೆ ಎಂದರು.
    ಬೆಲೆಯೇರಿಕೆಯಿಂದಾಗಿ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಈ ಸಮಸ್ಯೆಗೆಲ್ಲ ಪರಿಹಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆಯಾಗಿದೆ. ಉಚಿತ ಶಿಕ್ಷಣ, ಗುಣಮಟ್ಟದ ಚಿಕಿತ್ಸೆ, ಸ್ತ್ರೀ ಶಕ್ತಿ ಸಾಲಮನ್ನಾ, ರೈತರಿಗೆ ಸವಲತ್ತು ಸೇರಿದಂತೆ ಕನ್ನಡನಾಡು ಹಾಗೂ ಕನ್ನಡ ಭಾಷೆಯ ಉಳಿವಿಗೆ ಇರುವ ಏಕೈಕ ಪಕ್ಷ ಜೆಡಿಎಸ್. ತಮ್ಮೆಲ್ಲರ ಆಶೀರ್ವಾದದ ಫಲವಾಗಿ 5 ವರ್ಷಗಳಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಹೆಚ್ಚಿನ ಕಾಳಜಿವಹಿಸಿ ಹಲವು ವರ್ಷಗಳಿಂದ ಸಾಕಾರಗೊಳ್ಳದ ಮೊಗರಳ್ಳಿ ಮಂಟಿ ಭಾಗದ ಜನತೆಗೆ ಹಕ್ಕು-ಪತ್ರ ವಿತರಣೆ, ಕೆಆರ್‌ಎಸ್ ಕಂದಾಯ ಗ್ರಾಮ ಘೋಷಣೆ, ಮಹದೇವಪುರ ಬಹುಗ್ರಾಮಗಳ ಶುದ್ದ ಕುಡಿಯುವ ನೀರು ಯೋಜನೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಳ್ಳ ಕೊಳ್ಳ ಬಿದ್ದಿದ್ದ ರಸ್ತೆಗಳನ್ನು ಡಾಂಬರೀಕರಣಗೊಳಿಸಿದ್ದೇನೆ. ಆದರೆ ಮಾಜಿ ಶಾಸಕರು ಕೇವಲ ನಾಟಕವಾಡಿಕೊಂಡೇ ತಮ್ಮ ಎರಡು ಅವಧಿಯನ್ನೂ ಕಳೆದಿದ್ದು, ಇಂದು ಮತ ಕೇಳಲು ಬರುತ್ತಿರುವುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಮತ್ತೊಮ್ಮೆ ನನಗೆ ಆಶೀರ್ವಾದ ಮಾಡುವ ಮೂಲಕ ಕುಮಾರಣ್ಣನ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts