ಸಚಿವ ಈಶ್ವರ ಖಂಡ್ರೆ ಸುಬ್ರಹ್ಮಣ್ಯ ಮಠಕ್ಕೆ ಭೇಟಿ

New Project (8)
Published on

ಸುಬ್ರಹ್ಮಣ್ಯ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಕುಟುಂಬ ಸಮೇತ ಭೇಟಿ ಮಾಡಿ ಆಶೀರ್ವಾದ ಪಡೆದರು. ಸಚಿವರು ಮತ್ತು ಸಂಸದ ಸಾಗರ್ ಖಂಡ್ರೆ ಸ್ವಾಮೀಜಿ ಅವರಿಗೆ ಶಾಲು ಹೊದಿಸಿ ಫಲವಸ್ತು ಸಮರ್ಪಿಸಿದರು. ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಹರಸಿದರು.

ಮಠದ ದಿವಾನ ಸುದರ್ಶನ ಜೋಯೀಸ, ಡಿಸಿಎಫ್ ಆಂತೋಣಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಆರ್‌ಎಫ್‌ಒಗಳಾದ ಮಂಜುನಾಥ್ ಎನ್, ವಿಮಲ್ ಬಾಬು, ಸಂಧ್ಯಾ, ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಹರೀಶ್ ಎಸ್.ಇಂಜಾಡಿ, ರಘು, ಪ್ರದೀಪ್ ಕೈಕಂಬ, ಮೋಹನದಾಸ ರೈ, ಮಾಧವ ಡಿ, ಕಿಶೋರ್ ಅರಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net