ಕಾಸರಗೋಡು: ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಡಿ.27ರಿಂದ 2025ರ ಜನವರಿ 2ರ ವರೆಗೆ ಇರಿವಯಿಲ್ ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದಾಗಿ ದೇವಸ್ಥಾನ ಟ್ರಸ್ಟಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಬಲರಾಮನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
27ರಂದು ಸಂಜೆ 4ಕ್ಕೆ ನಾಲ್ವರ್ ದೈವಗಳ ಕಳಿಯಾಟ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಕನಕತೂರು ಅರಮನೆ, ಕಳರಿ ವೀಡು, ಪಡಿಪುರ, ಬನದಲ್ಲಿ ಶುದ್ಧೀಕರಣ, ಪ್ರಾರ್ಥನೆ ನಡೆಯುವುದು.
28ರಂದು ಬೆಳಗ್ಗೆ ಕಳರಿ ಮತ್ತು ಆನೆ ಚಪ್ಪರದ ಅಲಂಕಾರ, ಮಧ್ಯಾಹ್ನ 3ಕ್ಕೆ ಮೂಲಸ್ಥಾನದಿಂದ ಭಂಡಾರದ ಆಗಮನ, ಸಂಜೆ 7ಕ್ಕೆ ಇಳಯೋರ್ ದೇವರ ದರ್ಶನ ನಡೆಯುವುದು. 29ರಂದು ಬೆಳಗ್ಗೆ 4ಕ್ಕೆ ಶ್ರೀ ಚಾಮುಂಡಿ ದೇವರ ದರ್ಶನ, ವಿವಿಧ ದೈವಗಳ ನರ್ತನ ಸೇವೆ ನಡೆಯುವುದು. 30, 31 ಮತ್ತು ಜ.1ರಂದು ಇಳಯೋರ್, ಮೂತ್ತೋರ್, ಪಂಚುರ್ಲಿ, ಬಂಬೇರಿಯನ್, ಮಾಣಿಚಿ, ಕುಂಡಕಲಯನ್, ರಕ್ತೇಶ್ವರಿ, ವಿಷ್ಣುಮೂರ್ತಿ, ಪಾಷಾಣಮೂರ್ತಿ ಸೇರಿದಂತೆ ವಿವಿಧ ದೈವಗಳ ನರ್ತನ ಸೇವೆ ನಡೆಯುವುದು. ಜ.2ರಂದು ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳುವುದು ಎಂದು ತಿಳಿಸಿದರು.
ಕೆ.ಪಿ.ಮುರಳೀಧರನ್ ನಾಯರ್, ಕೆ.ಪಿ.ಬಾಲಚಂದ್ರನ್ ನಾಯರ್, ಕೆ.ಪಿ.ಜ್ಯೋತಿ ಚಂದ್ರನ್, ಕೆ.ಪಿ.ಜಯಕೃಷ್ಣನ್, ಕೆ.ಪಿ.ಶ್ರೀಜಿತ್, ಕೆ.ಪಿ.ಚಿದಾನಂದನ್, ವಿ.ವಿ.ಪ್ರಭಾಕರನ್, ಎಂ.ರಾಘವನ್ ನಾಯರ್, ರಾಮಕೃಷ್ಣನ್ ಎರಿಞಿಪುಯ ಉಪಸ್ಥಿತರಿದ್ದರು.