

ತುಮಕೂರು: ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಚಳಿ ಬಿಡಿಸಿದರು.
ಇದೇನು ಗೋಪಾಲ್ಪನ ಛತ್ರನಾ. ಮತ್ತೆ ಇದು ಪುನರಾವರ್ತನೆ ಆಗಬಾರದು ಎಂದ ಪರಮೇಶ್ವರ್ ಸೋಮವಾರ ಕೆಡಿಪಿ ತೆಮಾಸಿಕ ಸಭೆಗೆ ನಿಗದಿತ ಸಮಯಕ್ಕಿಂತ ತಡವಾಗಿ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಅಧಿಕಾರಿಗಳಿಗೆ ಬಾಗಿಲುತೆರೆಯದಂತೆ ಸೂಚನೆ ನೀಡಿದರು.
ಶಾಸಕರಿಗು ಸಮಯದ ಪಾಠ!: ಇನ್ನೊಂದು ಕಡೆ ಸಭೆಗೆ ತಡವಾಗಿ ಬಂದ ಶಾಸಕರಿಗೂ ಸಮಯದ ಪಾಠ ಮಾಡಿದ ಸಚಿವ ಡಾ..ಜಿ.ಪರಮೇಶ್ವರ್, ಸಭೆಗೆ ತಡವಾಗಿ ಬಂದ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್, ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ಗೆ ಇನ್ನೊಬ್ಬರಿಗೆ ಹೇಳಬೇಕಾದವರೇ ತಡವಾಗಿ ಬಂದರೆ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ವಿಷಯಾಂತರ ಮಾಡಿದರು. ಸಚಿವರು ತರಾಟೆಗೆ ತೆಗೆದುಕೊಂಡು ಏನೂ ಆಗಲ್ಲಿವೆಂಬಂತೆ ಅಧಿಕಾರಿಗಳು ಹಾಗೂ ಉಳಿದ ಶಾಸಕರು ನಕ್ಕು ಸುಮ್ಮನಾದರು.