ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ... ಶಿವಮೊಗ್ಗದಲ್ಲಿ ಯಾವ ಸುಡುಗಾಡು ಇಲ್ಲ: ಸಚಿವ ಈಶ್ವರಪ್ಪ

eshwarappa
Published on

ಬೆಂಗಳೂರು: ರಾಜ್ಯದಲ್ಲಿ ಒಂದೇ ರೀತಿಯ ಕರೊನಾ ರೂಲ್ಸ್​ ಇದೆ ಎಂದು ಯಾರು ಹೇಳಿದ್ದು? ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಸುಡುಗಾಡು ಇಲ್ಲ... ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಗುರುವಾರ ಕ್ಯಾಬಿನೆಟ್​ ಸಭೆಗೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಜಿಲ್ಲೆಗಳಿಗೆ ಇನ್ನೂ ‌ಆದೇಶ ಬಂದಿಲ್ಲ. ನಾನು‌ ಬೇಜಾರು ಮಾಡಿಕೊಂಡಿಲ್ಲ. ಜನರ ಭಾವನೆಗಳನ್ನ ನಿನ್ನೆ ವ್ಯಕ್ತಪಡಿಸಿದ್ದೆ ಅಷ್ಟೆ. ಕರೊನಾ-ಒಮಿಕ್ರಾನ್​ ಸೋಂಕು ತಡೆ ಹಿನ್ನೆಲೆ ಬೆಂಗಳೂರಿನಲ್ಲಿ ಬಿಗಿ ‌ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜತೆ ಮಾತನಾಡುವೆ. ಎಲ್ಲಿ‌ ಸಮಸ್ಯೆ ಇದೆ ಅಲ್ಲಿ ಬಿಗಿ ಮಾಡ್ತೇವೆ ಎಂದರು.

ತಜ್ಙರ ಸಲಹೆಯಂತೆ ಮೊನ್ನೆ ಕರೊನಾ ತಡೆಗೆ ಟೈಟ್​ ರೂಲ್ಸ್​ ಬಗ್ಗೆ ನಿರ್ಧಾರವಾಗಿತ್ತು. ಇಂದು ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡ್ತೇವೆ. ಯಾವ ಜಿಲ್ಲೆಗಳಲ್ಲಿ ಸೋಂಕು ಕಡಿಮೆ ಇದೆ ಅಲ್ಲಿ ಬೇಡ ಎಂದು ಹೇಳ್ತೇವೆ. ಎಲ್ಲಿ ‌ಸಮಸ್ಯೆ ಇದೆ ಅಲ್ಲಿ ಮಾಡ್ತೇವೆ. ಎಲ್ಲಿ ಸಮಸ್ಯೆ ಇಲ್ಲ ಅಲ್ಲಿ ತೆರವು ಮಾಡೋಣ ಎಂದರು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net