

ಸುಬ್ರಹ್ಮಣ್ಯ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಶ್ರೀ ದೇವರ ದರ್ಶನ ಮಾಡಿದ ಸಚಿವರಿಗೆ ದೇವಳದ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ಶಾಲು ಹೊದಿಸಿ ಪ್ರಸಾದ ನೀಡಿದರು.
ಮಂಗಳೂರು ವೃತ್ತ ಸಿಸಿಎಫ್ ಡಾ.ಕರಿಕಾಳನ್, ಮಡಿಕೇರಿ ಸಂಶೋಧನಾ ವಿಭಾಗದ ಸಿಸಿಎಫ್ ಕಮಲ, ಮಂಗಳೂರು ವಿಭಾಗ ಡಿಸಿಎಫ್ ಆಂತೋಣಿ ಮರಿಯಪ್ಪ, ಸುಬ್ರಹ್ಮಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸ್ಕಂಧ, ಪ್ರಮುಖರಾದ ಮನೋಹರ ನಾಳ, ರವೀಂದ್ರ ಕುಮಾರ್ ರುದ್ರಪಾದ, ಚಂದ್ರಶೇಖರ ಬಸವನಮೂಲೆ, ಶಿವರಾಮ ಪಳ್ಳಿಗದ್ದೆ, ಪವನ್ ಎಂ.ಡಿ, ಶಿವರಾಮ ರೈ ಉಪಸ್ಥಿತರಿದ್ದರು.