ನಾಡಿಗೆ ಅನ್ನ ಕೊಟ್ಟ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲಿ: ಸಚಿವ ಅಶೋಕ್ ಒತ್ತಾಯ

RAshok
Published on

ಬೆಳಗಾವಿ: ಒಕ್ಕಲಿಗ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕು ಎಂಬ ಬೇಡಿಕೆ ನ್ಯಾಯಯುತವಾಗಿದೆ. ನಾಡಿಗೆ ಅನ್ನ ಕೊಟ್ಟ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಕುಂಚಿಟಿಗ ಹಾಗೂ ಬಂಟರನ್ನು ಒಬಿಸಿಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್​ ಒತ್ತಾಯಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು, ಶೇ.4 ರಿಂದ 12ಕ್ಕೆ ಮೀಸಲಾತಿ ಏರಿಕೆ ಮಾಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ನಗರ ಪ್ರದೇಶದ ಒಕ್ಕಲಿಗರಿಗೆ ಮೀಸಲಾತಿ ಇಲ್ಲ. ಅದನ್ನು ಆರ್ಥಿಕ ಹಿಂದುಳಿದ ವರ್ಗಗಳ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು.‌ ನ್ಯಾಯ ಒದಗಿಸಿಕೊಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ.‌ ಅವರ ಮೇಲೆ ಅಚಲವಾದ ನಂಬಿಕೆ, ವಿಶ್ವಾಸ ಇದೆ ಎಂದರು.

ಶಾಸಕ ಮಸಾಲೆ ಜಯರಾಮ್ ಮಾತನಾಡಿ, ನಿರ್ಮಲಾನಂದನಾಥ ಶ್ರೀಗಳು ಎಲ್ಲರೂ ಒಗ್ಗಟ್ಟಿನಿಂದ ಹೋಗುವಂತೆ ಹೇಳಿದ್ದಾರೆ. ಸಚಿವರು, ಶಾಸಕರು ಹೋಗಿ ಭೇಟಿ ಮಾಡಿ ಮನವಿ ಮಾಡುತ್ತೇವೆ. ಜನವರಿ 4 ರಂದು ನಮ್ಮ ಸ್ವಾಮೀಜಿಗಳನ್ನ ಭೇಟಿ ಮಾಡುತ್ತೇವೆ ಎಂದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net