ಮನೆಹಾಳು ಮಾಡೋ ಕೆಲಸ ಕಾಂಗ್ರೆಸ್ ಪಾರ್ಟಿದು ಅಶೋಕ್ ಲೇವಡಿ

Ashok_CM
Published on

ಕೊರಟಗೆರೆ: ಕಾಂಗ್ರೆಸ್ ಅಭಿವೃದ್ಧಿ ಮಾಡಲ್ಲ. ಮನೆಹಾಳು ಮಾಡೋ ಕೆಲಸ ಕಾಂಗ್ರೆಸ್ ಪಾರ್ಟಿದು ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.

ಕೊರಟಗೆರೆ ಪಟ್ಟಣದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಜತೆ ಭಾಗವಹಿಸಿ ಮಾತನಾಡಿದ ಅವರು, 60 ವರ್ಷ ಆಯ್ತು ಕಾಂಗ್ರೆಸ್‌ನವರು ಈಗ ಬಂದಿದ್ದಾರೆ. ನಮ್ಮಿಂದ ಅಭಿವೃದ್ಧಿಯಾಯ್ತು ಅಂತ. ಅವರ ಕೈಯಲ್ಲಿ ಎನು ಕಿಸಿಲಿಕ್ಕೆ ಆಗಿಲ್ಲ ಎಂದು ಹರಿಹಾಯ್ದರು.

ಈಗ 2000 ಸಾವಿರ ಕೊಡ್ತೀನಿ ಅಂತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾಕೆ ಅವರ ಕೈಯಲ್ಲಿ ಕೊಡೋಕೆ ಆಗಲಿಲ್ವಾ..? ವಿದ್ಯುತ್ ಉಚಿತವಾಗಿ ಕೊಡ್ತೀನಿ ಅಂತಾರೆ. ಅವತ್ತು ಡಿ.ಕೆ.ಶಿವಕುಮಾರ್ ಪವರ್ ಮಿನಿಸ್ಟರ್, ಪವರ್ ಫುಲ್ ಮಿನಿಸ್ಟರ್ ಆಗಿದ್ದರು. ಆವಾಗ 200 ಯುನಿಟ್ ಕೊಡಬಹುದಿತ್ತಲ್ಲ, ಯಾಕೆ ಕೊಡಲಿಲ್ಲ ? ಜನರಿಗೆ ನಾಮ ಹಾಕಲು ಈಗ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net