ರೋಗ ಲಕ್ಷಣಗಳಿಲ್ಲದಿದ್ರೂ ಸಚಿವ ಆನಂದ್​ ಸಿಂಗ್​ಗೆ ಕರೊನಾ ಸೋಂಕು ದೃಢ

Anandsing
Published on

ಬಳ್ಳಾರಿ: ಅರಣ್ಯ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಆನಂದ್​ ಸಿಂಗ್​ ಅವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಚಿವರು ಶುಕ್ರವಾರ ಸ್ವಯಂ ಪ್ರೇರಿತರಾಗಿ ಕೋವಿಡ್​-19 ಟೆಸ್ಟ್ ಮಾಡಿಸಿದ್ದರು. ಶನಿವಾರ ರಾತ್ರಿ ವರದಿ ಬಂದಿದ್ದು, ಆನಂದ್ ಸಿಂಗ್​ಗೆ ಕರೊನಾ ಸೋಂಕು ಧೃಡವಾಗಿದೆ.

ಯಾವುದೇ ರೋಗದ ಲಕ್ಷಣಗಳಿಲ್ಲದೇ ಕರೊನಾ ಧೃಡವಾಗಿದ್ದು, ಎ ಸಿಂಪ್ಟಮ್ಯಾಟಿಕ್ ಕೇಸ್ ಆಗಿರುವುದರಿಂದ ಸಿಂಗ್ ತಮ್ಮ ಹೊಸಪೇಟೆ​ ಮನೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ. ಪಾಸಿಟಿವ್ ಬಂದಿರೋದು ನಿಜ. ಆದರೆ ಸಿಂಗ್ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಆನಂದ್ ಸಿಂಗ್ ಕರೊನಾ ಸೋಂಕಿತರ ವಾರ್ಡ್ ಒಳಗೆ ಹೋಗಿ ಬಂದಿದ್ದರು. ಅಲ್ಲದೇ ಅವರ ಕಾರು ಚಾಲಕನಿಗೂ ಕರೊನಾ ಧೃಡವಾಗಿತ್ತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net