ಮಾಸ್ಕ್​ ಎಲ್ಲಿ ಎಂದಿದ್ದಕ್ಕೆ ಮಹಿಳೆ ಜತೆ ಅಸಭ್ಯ ವರ್ತನೆ: ಜನ ಬರ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಯುವಕರು ಪರಾರಿ

Car turn
Published on

ಚಿಕ್ಕಮಗಳೂರು: ಕರೊನಾ ವೈರಸ್​ ಸಂಕಷ್ಟ ಕಾಲದಲ್ಲಿ ಇತರರ ಕಾಳಜಿ ಮಾತ್ರವಲ್ಲದೇ ತಮ್ಮ ರಕ್ಷಣೆಗೂ ಮಾಸ್ಕ್​ ಧರಿಸುವುದು ಒಳ್ಳೆಯದು ಎಂದು ತಜ್ಞರು ಸೂಚಿಸಿದ್ದಾರೆ. ಆದರೆ, ಅದನ್ನು ಅರ್ಥ ಮಾಡಿಕೊಳ್ಳದ ಕೆಲ ಅವಿವೇಕಿಗಳು ಹೇಸಿಗೆ ಬರುವಂತ ಕೆಲಸ ಮಾಡುವುದು ದುರ್ದೈವದ ಸಂಗತಿ.

ಹೌದು, ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿ ಇದೇ ರೀತಿಯ ಘಟನೆಯೊಂದು ಎರಡು ದಿನದ ಹಿಂದೆ ನಡೆದಿದ್ದು, ಇದೀಗ ವಿಡಿಯೋ ವೈರಲ್​ ಆಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ.

ಮಾಸ್ಕ್ ಹಾಕದಿದ್ದನ್ನು ಪ್ರಶ್ನಿಸಿದಕ್ಕೆ ಸ್ಥಳೀಯರೊಂದಿಗೆ ಕ್ಯಾತೆ ತೆಗೆದ ಉಡುಪಿ ಮೂಲದ ಯುವಕರು ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ಕಾರ್ ಟರ್ನ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net