More

    ವಾರ ಭವಿಷ್ಯ: ಈ ರಾಶಿಯವರಿಗೆ ಎಲ್ಲವೂ ಶುಭಾಂತ್ಯದಲ್ಲಿ ಸುಖ-ಸಂತೋಷ ಕೊಡುತ್ತದೆ

    ಮೇಷ: ಸತ್ಪಲವನ್ನು ನಿರೀಕ್ಷಣೆ ಮಾಡುವ ಸಮಯ. ಕಾರ್ಯರಂಗದಲ್ಲಿ ಯಶಸ್ಸು ಸಿಗಬೇಕಾದರೆ ಗುರುವಿನ ಮೇಲೆ ಅವಿಚ್ಛಿನ್ನ ಭಕ್ತಿ ಇರಬೇಕು. ಆ ಗುರುಭಕ್ತಿ, ಸೇವೆಯಲ್ಲಿ ದೀಪಕನ ಸರಿಸಮಾನವಾದ ಮನುಷ್ಯ ಜನ್ಮ ತಾಳಿಲ್ಲ. ಅನನ್ಯವಾಗಿ ಗುರುಸ್ಮರಣೆ ಮಾಡಿ ಷಷ್ಠಿಯಂದು ಸುಬ್ರಹ್ಮಣ್ಯನನ್ನು ಪೂಜಿಸಿ. ಒಳ್ಳೆಯ ಕಾಲವಿದೆ.

    ವೃಷಭ: ಅಷ್ಟಮ ಗುರುವಿಗಾಗಲಿ, ಚತುರ್ಥದ ರವಿ-ಬುಧನಿಗಾಗಲಿ ಹೆದರಿ ಓಡಬೇಕಿಲ್ಲ. ರವಿ-ಬುಧರು ಶುಭ ಮಾಡುವರು. ಅಚಂಚಲವಾದ ಗುರುಭಕ್ತಿಯಿಂದ ಏನು ಪ್ರಾರ್ಥಿಸಿದರೂ ಹರಿ-ಹರರು ಕೊಡದಿದ್ದರೂ ಗುರು ಕೊಟ್ಟೇ ಕೊಡುತ್ತಾನೆ. ಒಂಬತ್ತನೆಯ ಶನಿ ಒಬ್ಬನೇ ಸಾಕು. ನಿಮ್ಮ ಧೈರ್ಯ ಸಾಹಸ ತೋರಿಸಿ. ವಿನಾಯಕನನ್ನು ಗರಿಕೆಯಿಂದ ಪೂಜಿಸಿ.

    ಮಿಥುನ: ಅಲ್ಪಸ್ವಲ್ಪ ಗುರುಕಟಾಕ್ಷವಿದ್ದರೂ ರಾಹು-ಕೇತುಗಳು ಮಾಡಿದ ತಪ್ಪುಗಳನ್ನು ಕ್ಷಮಿಸುವುದಿಲ್ಲ. ಮಧ್ಯಾಹ್ನದ ವೇಳೆ ಸೂರ್ಯನ ತಾಪ ಎಷ್ಟು ಕಠಿಣವಾಗಿರುತ್ತದೆಯೊ, ಪಾಪಗಳನ್ನು ಕಳೆಯುವುದು ಅಷ್ಟೇ ಕಷ್ಟಸಾಧ್ಯವಾಗಿರುತ್ತದೆ. ಲಕ್ಷ್ಮೀನರಸಿಂಹನನ್ನು ಪೂಜಿಸಿ, ಧ್ಯಾನಿಸಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

    ಕಟಕ: ರವಿ -ಬುಧರು ಜಲರಾಶಿಯಲ್ಲಿದ್ದು ಶೀತಗಾಳಿಯು ಬೀಸಿ ಶರೀರಕ್ಕೆ ಅಲ್ಪ ತೊಂದರೆ ಸಾಧ್ಯತೆ. ಹನ್ನೆರಡರ ರಾಹುವು ಕೈ – ಕಾಲಿಗೆ ಪೆಟ್ಟನ್ನು ಮಾಡಿ ಧನವ್ಯಯವಾಗಬಹುದು. ಶಿವಧ್ಯಾನ, ಶ್ರೀಶೈಲ ಮಲ್ಲಿಕಾರ್ಜುನನನ್ನು ಐದು ಸೋಮವಾರ ಪೂಜಿಸಿದಲ್ಲಿ ದೇವರು ಪರಿಹಾರ ಮಾರ್ಗಕ್ಕೆ ಕೊಂಡೊಯ್ಯುತ್ತಾನೆ.

     ಸಿಂಹ: ಹನ್ನೆರಡರ ರವಿ-ಬುಧರಿಂದ ಮೂಳೆ, ಮಾಂಸಖಂಡ, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಔಷದ ಬೇಡ. ಸೂರ್ಯ ನಮಸ್ಕಾರ ಮಾಡಿ. ಸ್ಥಿರವಾರವಾದ ಸೋಮವಾರ ಅಭ್ಯಂಜನ ಮಾಡಿ. ಪಂಚಮ ಗುರು, ಆರನೇ ಶನಿ ಸುಖ ನೀಡುತ್ತಾನೆ. ಮನಃಶಾಂತಿಗಾಗಿ ಪಾಂಡುರಂಗನನ್ನು ಪ್ರಾರ್ಥಿಸಿ ಪೂಜಿಸಿ.

    ಕನ್ಯಾ: ಜೀವನದಲ್ಲಿ ರಹಸ್ಯವಿರಬೇಕು, ಹಿತೈಷಿಗಳಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಪಂಚಮ ಶನಿ ಘೋರವಾದ ವ್ಯಾಧಿಯನ್ನು ಸೂಚಿಸಿದರೂ, ಅದಕ್ಕೆ ಪರಿಹಾರ ಶ್ರೀಕ್ಷೇತ್ರ ಗಾಣ ದತ್ತಾತ್ರೇಯನಾದ ನಾರಾಯಣನ ಪೂಜೆಯೇ. ಶ್ರೀ ಗುರುಚರಿತ್ರೆಯ 30, 31 ಹಾಗು 32ನೇ ಅಧ್ಯಾಯ ಓದಿದವರಿಗೆ ಗುರು ಏನು ಕೇಳಿದರೂ ಕೊಡುವ ದೈವ ಎಂದು ನಂಬಬೇಕು. ಧೈರ್ಯಗೆಡಬೇಡಿ.

    ತುಲಾ: ಚತುರ್ಥ ಶನಿ, ತೃತೀಯ ಗುರು ಕೆಲವೊಂದು ಅಶಾಂತಿಯನ್ನು ಉಂಟು ಮಾಡಿದರೂ ಶಾಂತಚಿತ್ತರಾಗಿರಲು ಕಾಯಬೇಕು. ಧನಕ್ಕೆ ಸರಿಸಮಾನವಾದದ್ದು ಸಹನೆ, ತಾಳ್ಮೆ ಹಾಗೂ ಇಟ್ಟ ಹೆಜ್ಜೆಯನ್ನು ಹಿಂದೆಗೆಯಕೂಡದು. ಎಲ್ಲವೂ ಶುಭಾಂತ್ಯದಲ್ಲಿ ಸುಖ-ಸಂತೋಷವನ್ನು ಕೊಡುತ್ತದೆ.

    ವೃಶ್ಚಿಕ: ಧೈರ್ಯಂ ಸರ್ವತ್ರ ಸಾಧನಂ. ದೇಹ ಸುಖ ಭೋಗ ಭಾಗ್ಯಂ ಐಶ್ವರ್ಯಂ ಕಾರ್ಯಸಿದ್ಧಿ ಉಂಟಾಗುವುದು. ದೂರದ ಮಾತಲ್ಲ. ಈ ರಾಶಿಯವರು ಭೂಸಂಪತ್ತು ಖನಿಜ ವ್ಯವಹಾರಗಳಲ್ಲಿ ತೊಡಗಿರುವವರು. ಸಂಡೂರು (ಬಳ್ಳಾರಿ ಜಿಲ್ಲೆಯ) ಸುಬ್ರಹ್ಮಣ್ಯನನ್ನು ಪ್ರಾರ್ಥಿಸಬೇಕು. ಭೂಮಿಯಿದೆ, ಧನವಿದೆ. ಆದರೆ ಬೀಗದ ಕೈ ದೈವಭಂಡಾರದಲ್ಲಿದೆ. ಗುರುವನ್ನು ಪ್ರಾರ್ಥಿಸಿ. ಎಲ್ಲವನ್ನು ಪಡೆದುಕೊಳ್ಳಿ.

    ಧನುಸ್ಸು: ಶಂಕರಭಗವತ್ಪಾದರು ಲೀಲಾಮಾನುಷ ದೇಹ ಧರಿಸಿ ಸಾಕ್ಷಾತ್ ಶಂಕರನಾಗಿ ಅವತರಿಸಿದ್ದು ಕಟ್ಟುಕಥೆಯಲ್ಲ. ಈ ರಾಶಿಯವರು ಚಂಡಾಲನೇ ಗುರುವಾಗಿದ್ದರೂ ಸಹ ಅವರನ್ನು ನಂಬಿ ನಡೆಯಿರಿ-ಬೇಕಾದ್ದನ್ನು ಪಡೆಯಬಹುದು. ಮುಂದೆ ಆಯುರಾರೋಗ್ಯ ಐಶ್ವರ್ಯಗಳು ದೊರೆಯುವ ಸಮಯ. ಸುಂದರಕಾಂಡ ಪಾರಾಯಣ ಮಾಡಿ.

    ಕುಂಭ: ಆನಂದವು ಕೊಳ್ಳುವ ವಸ್ತುವಲ್ಲ. ಹಾಗೆಯೇ ಸತ್ಸಂತಾನ ಬೇಕಾದಲ್ಲಿ ಮಕ್ಕಳನ್ನು ಎಲ್ಲೂ ಕ್ರಯಕ್ಕೆ ಕೊಡುವುದಿಲ್ಲ. ಪೂರ್ವಜನ್ಮದ ಪುಣ್ಯ, ಹಿರಿಯರ ಆಶೀರ್ವಾದದಿಂದ ಜನ್ಮವೆತ್ತುತ್ತಾರೆ. ಹಾಗೆಯೇ ಜನ್ಮಶನಿ ನೀವು ಪಡೆದಿದ್ದನ್ನು ಅನುಭವಿಸಲೇಬೇಕು. ನೀವು ಕೊಟ್ಟಿದ್ದನ್ನು ದ್ವಿಗುಣವಾಗಿ ಮುಂದೆ ಕೊಡುತ್ತಾನೆ. ಶನಿಕಥೆ ಓದಿ ಶಿವನನ್ನು ಪೂಜಿಸಿ.

    ಮಕರ: ದ್ವಾದಶ ಶನಿ ಪೂರ್ಣತಾಪವನ್ನು ತೋರಲು ಶಕ್ತನಾಗಿಲ್ಲ. ಹನ್ನೊಂದರ ಗುರು ಶನಿಯ ನೆರಳಿನಿಂದ ದೂರವಿಟ್ಟಿರುತ್ತಾನೆ. ಈ ಮಧ್ಯಕಾಲ ಗುರುವನ್ನು ಸ್ಮರಿಸಿ ಪೂಜಿಸಿ. ಮುಂದೆ ಅಲ್ಪ-ಕಷ್ಟ ಬಂದಾಗ ಸಹಿಸಿಕೊಂಡು ನಿಭಾಯಿಸುವಿರಿ. ಮನೆಯಲ್ಲೇ ತ್ರಯಂಬಕ ಮಂತ್ರವನ್ನು ಉಪದೇಶ ಪಡೆದು ದುಷ್ಟ ಆಲೋಚನೆಯನ್ನು ದೂರಮಾಡಿ ದೈವಶಕ್ತಿಯನ್ನು ಪಡೆದುಕೊಳ್ಳಿ.

    ಮೀನ: ಈ ರಾಶಿಯಧಿಪತಿ ದಶಮದಲ್ಲಿ ಪೂರ್ವಪುಣ್ಯ ಕೊಡುವವನು. ಧರ್ಮಕರ್ಮದ ಅಧಿಪತಿ ಶನಿ ಏನೇನು ಒಳ್ಳೆಯದನ್ನು ಕೊಡುತ್ತಾನೋ ಹಾಗೆಯೇ ನೀವು ಅನ್ಯರಿಗೆ ಒಳ್ಳೆಯದನ್ನು ಮಾಡಿ. ಮೃಷ್ಟಾನ್ನ ಉಣ್ಣುವ ಕಾಲ. ಹರಿಹರರಲ್ಲಿ ಭೇದವಿಲ್ಲದೆ ಪೂಜಿಸಿ, ಧ್ಯಾನಿಸಿ. ಸಂಪತ್ತನ್ನು ಇಟ್ಟು ತೆರಿಗೆಯವರು ತೆಗೆಯುವುದು ಬೇಡ. ಧರ್ವಚರಣೆ ಮಾಡಿ. ಹಿತನುಡಿಗಳೇ ಪರೋಪಕಾರದ ಪುಣ್ಯ ತರಲಿವೆ.

    ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts