

ಹಗರಿಬೊಮ್ಮನಹಳ್ಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ನಿಮ್ಮಿತ್ತ ಫೆ.26ರಂದು 89ನೇ ಸಂದೇಶ ಹಾಗೂ ಲಿಂಗದರ್ಶನದ ಸದ್ಭಾವನ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮ್ಮಕುಮಾರಿ ಬಸಮ್ಮಕ್ಕ ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 9ಗಂಟೆಯಿಂದ ರಾತ್ರಿ 9ಗಂಟೆವರೆಗೆ ಸ್ತಬ್ಧಚಿತ್ರ ಪ್ರದರ್ಶನ, ಜಲಾಧಾರೆ ಶಿವಲಿಂಗ ದರ್ಶನ ಚಿಟಿ ಮತ್ತು ಆಧ್ಯಾತ್ಮಿಕ ಚಿತ್ರ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ. ವಿಶೇಷವಾಗಿ ಶಿವಲಿಂಗದರ್ಶನದೊಂದಿಗೆ ಕುಂಭಕರ್ಣನನ್ನು ಎಬ್ಬಿಸುವ ಕಾರ್ಯಕ್ರಮ ಆಕರ್ಷಣೆಯಾಗಿರುತ್ತದೆ. ಬೆಳಗ್ಗೆ 8ಕ್ಕೆ ರಾಮನಗರದ ಈಶ್ವರ ದೇಗುಲದಲ್ಲಿ ಸಹಸ್ರಾರು ಲಿಂಗ ದರ್ಶನ ಏರ್ಪಡಿಸಲಾಗಿದೆ, ಬಳಿಕ ಆರಂಭವಾಗುವ ಯಾತ್ರೆ ರಾಮನಗರ, ಬಸವೇಶ್ವರ ಬಜಾರದ ಮೂಲಕ ಸಾಗಿ ನೀರಾವರಿ ಇಲಾಖೆ ಆವರಣದಲ್ಲಿ ಕೊನೆಗೊಳ್ಳಲಿದೆ ಎಂದರು.