ನೃತ್ಯ ಕಲಾವಿದರಿಗೆ ಬ್ರಹ್ಮಕುಮಾರಿ ಸ್ನೇಹಮಿಲನ ನೃತ್ಯ ರಂಗ ಪುರಸ್ಕಾರ

IMG-20250127-WA0019
Published on

ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮಂಗಳೂರು ವತಿಯಿಂದ ರಂಗದಲ್ಲಿ ಸಾಧನೆಗೈದ ಸುಮಾರು 20 ನೃತ್ಯ ಕಲಾಸಾಧಕರಿಗೆ ನಗರದ ಉರ್ವಾಸ್ಟೋರ್ ನಲ್ಲಿರುವ ಬ್ರಹ್ಮಕುಮಾರೀಸ್ ಸಭಾಂಗಣದಲ್ಲಿ ನೃತ್ಯ ಸ್ನೇಹ ಮಿಲನ ನೃತ್ಯ ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು.

ದೀಪ ಪ್ರಜ್ವಲನೆಗೈದು ಪುರಸ್ಕಾರ ಪ್ರದಾನಗೈದ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು, ಮಂಗಳೂರಿನ ಎಲ್ಲ ನೃತ್ಯ ಕುಟುಂಬವನ್ನು ಒಂದೇ ಸ್ಥಳದಲ್ಲಿ ಸೇರಿಸಿ ಸನ್ಮಾನ ಮಾಡಿದ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರು, ಪುತ್ತೂರು ವಿಶ್ವಕಲಾನಿಕೇತನ ಇನ್ಸ್ ಟಿಟ್ಯೂಟ್ ಆಫ್ ಆರ್ಟ್ ಆಂಡ್ ಕಲ್ಚರ್ ನಿರ್ದೇಶಕಿ ವಿದುಷಿ ನಯನ .ವಿ. ರೈ, ಕುದ್‌ಕಾಡಿ, ಮಂಗಳೂರು ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಭಾಗವಹಿಸಿದ್ದರು. ಈಶ್ವರೀಯ ಸಂದೇಶವನ್ನು ಬ್ರಹ್ಮಾಕುಮಾರಿ ವಿಶ್ವೇಶ್ವರಿ ಸಂಚಾಲಕರು ನೀಡಿದರು. ಬಿಕೆ ಜಯಾ ಸ್ವಾಗತಿಸಿದರು. ಬಿಕೆ ರೇವತಿ ಸಂಸ್ಥೆಯನ್ನು ಪರಿಚಯಿಸಿದರು. ಬಿಕೆ ಸ್ನೇಹ ಕಾರ್ಯಕ್ರಮ ನಿರೂಪಿಸಿದರು.

ನೃತ್ಯ ರಂಗ ಪುರಸ್ಕಾರ ಪುರಸ್ಕೃತರು: ನೃತ್ಯ ಗುರುಗಳಾದ ಗೀತಾ ಸರಳಯ, ರಾಜಶ್ರೀ ಉಳ್ಳಾಲ್, ಸುಲೋಚನ .ವಿ. ಭಟ್, ಕೆ. ಚಂದ್ರಶೇಖರ ನಾವಡ, ಯು. ಕೆ. ಪ್ರವೀಣ್, ಸುರೇಶ್ ಅತ್ತಾವರ, ಬಾಲಕೃಷ್ಣ. ವಿ. ಮಂಜೇಶ್ವರ, ಸುಮಂಗಲಾ ರತ್ನಾಕರ್ ರಾವ್, ವಿನಯ ರಾವ್, ಡಾ.ಶ್ರೀವಿದ್ಯಾ ಮುರಲೀಧರ್, ಶ್ರೀಲತಾ ನಾಗರಾಜ್, ವಿದ್ಯಾಶ್ರೀ ರಾಧಾಕೃಷ್ಣ, ರಾಧಿಕಾ ಶೆಟ್ಟಿ, ಅನ್ನಪೂರ್ಣ ರಿತೇಶ್, ಮನೋಜ್ ಗಣೇಶ್‌ಪುರಿ, ರಮ್ಯಾಚಂದ್ರ, ಧನ್ಯಶ್ರೀ. ಡಿ. ಭಟ್, ವೈಷ್ಣವಿ ಪ್ರಭು, ಶ್ರೀಜಿತ್ ಶೆಟ್ಟಿ, ವೈಷ್ಣವಿ ನೃತ್ಯ ರಂಗ ಪುರಸ್ಕಾರ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net