ಎಂ.ಜಿ.ರಸ್ತೆ ಕನ್ಸರ್​ವೆನ್ಸಿಯಲ್ಲಿ ಫುಟ್ ಪಾತ್​ ವ್ಯಾಪಾರಿಗಳಿಗೆ ಅವಕಾಶ ಬೇಡ

GBJ
Published on

ತುಮಕೂರು: ಎಂ.ಜಿ.ರಸ್ತೆಯ ಕನ್ಸರ್​ವೆನ್ಸಿ ಜಾಗ ಬಳಕೆ ವಿಚಾರ ಇದೀಗ ಪಾಲಿಕೆ ಹಾಗೂ ನಗರ ಶಾಸಕರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಸ್ಮಾರ್ಟ್​ಸಿಟಿ ಯೋಜನೆ ಅಡಿ ಅಭಿವೃದ್ಧಿ ಪಡಿಸಿರುವ ಎಂಜಿ ರಸ್ತೆಯ ಕನ್ಸರ್​ವೆನ್ಸಿಗಳಲ್ಲಿ 'ಫುಟ್ ಪಾತ್​' ವ್ಯಾಪಾರಿಗಳಿಗೆ ಅವಕಾಶ ನೀಡಲು ಮಹಾನಗರಪಾಲಿಕೆ ಸಿದ್ಧತೆ ನಡೆಸಿದ್ದು ಸಂರ್ಷಕ್ಕೆ ದಾರಿಮಾಡಿಕೊಟ್ಟಿದೆ.

ನಗರದ ಎಂ.ಜಿ.ರಸ್ತೆಯ ಕನ್ಸರ್​ವೆನ್ಸಿಯ ಜಾಗಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಮಾಡಲು ಮಹಾನಗರಪಾಲಿಕೆಗೆ ಸೂಚಿಸಲಾಗಿದೆ. ಈ ಹಿಂದೆ ಮಹಾನಗರಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸಹ ಈ ತೀಮಾರ್ನವನ್ನು ಮಾಡಲಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಖಡಕ್​ ಎಚ್ಚರಿಕೆಯನ್ನು ಪಾಲಿಕೆ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಕನ್ಸರ್​ವೆನ್ಸಿಗಳಲ್ಲಿ ಫುಟ್ ಪಾತ್​ ವ್ಯಾಪಾರಿಗಳಿಗೆ ಅವಕಾಶ ನೀಡಲು ಮಹಾನಗರಪಾಲಿಕೆ ಸಿದ್ಧತೆ ನಡೆಸಿದ್ದು, ನಮ್ಮ ರಕ್ಷಣೆ ಮಾಡಬೇಕು. ತುಮಕೂರು ಪಾಲಿಕೆಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿ ಮಾಡಿ ಎಂ.ಜಿ.ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದು, ನಮಗೆ ಮಾರಕವಾಗುವಂತಹ ಕನ್ಸರ್​ವೆನ್ಸಿಗಳಲ್ಲಿ ಹಾಗೂ ಎಂ.ಜಿ.ರಸ್ತೆಯ ಮುಂಭಾಗದಲ್ಲಿ ಫುಟ್ ಪಾತ್​ ವ್ಯಾಪಾರಿಗಳಿಗೆ ಅವಕಾಶ ಮಾಡುವುದನ್ನು ಕೈಬಿಡುವಂತೆ ಶಾಸಕರ ಬಳಿ ಎಂ.ಜಿ.ರಸ್ತೆಯ ವರ್ತಕರು ಮನವಿ ಮಾಡಿದ್ದಾರೆ. ಇನ್ನೂ ಎಂ.ಜಿ.ರಸ್ತೆಯ ನಿವಾಸಿಗಳು ಕನ್ಸರ್​ವೆನ್ಸಿಯನ್ನು ನಾವು ಉಪಯೋಗಿಸಲು ನಮಗೆ ಹಕ್ಕಿದೆ. ದಯವಿಟ್ಟು ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಿ, ತೆರಿಗೆದಾರರ, ನಿವಾಸಿಗಳ ಹಿತ ಕಾಪಾಡಬೇಕು, ಫುಟ್ ಪಾತ್ ವ್ಯಾಪಾರಿಗಳಿಗೆ ಬೇರೆ ಸ್ಥಳಗಳಲ್ಲಿ ಜಾಗ ನೀಡಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನಿಡುವಂತೆ ಆಗ್ರಹಿಸಿದ್ದಾರೆ.

ಪಾಲಿಕೆ ಸಭೆಯಲ್ಲಿ ರ್ನಿಣಯ: ಮಹಾನಗರಪಾಲಿಕೆಯ ಸಭೆಗಳಲ್ಲಿ ಎಂ.ಜಿ.ರಸ್ತೆ ಹಾಗೂ ಜನರಲ್​ ಕಾರಿಯಪ್ಪ ರಸ್ತೆಯ ಕನ್ಸರ್​ವೆನ್ಸಿಗಳಲ್ಲಿ ಯಾವುದೇ ವಾಣಿಜ್ಯ ವಹಿವಾಟುಗಳನ್ನು ನಡೆಸದೇ ಕೇವಲ ಪಾರ್ಕಿಂಗ್​ ವ್ಯವಸ್ಥೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಆಯುಕ್ತರಿಗೆ ಸೂಚಿಸಲಾಗಿತ್ತು. ಸಾಧಕ ಭಾಧಕಗಳ ಚರ್ಚೆಯನ್ನು ನಡೆಸಿಯೇ ಪಾರ್ಕಿಂಗ್​ ವ್ಯವಸ್ಥೆಗೆ ಕಾಯ್ದಿರಿಸಲು ಪಾಲಿಕೆ ಸಭೆಯಲ್ಲಿ ತೀಮಾರ್ನಿಸಲಾಗಿತ್ತು. ಹಾಗಾಗಿ, ವರ್ತಕರು ಯಾವುದೇ ಆತಂಕ ಪಡುವುದು ಬೇಡ. ಬೇರೆ ಸ್ಥಳಗಳಲ್ಲಿ ಫುಟ್ ಪಾತ್​ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಜಾಗ ಗುರುತಿಸಲು ಈ ಹಿಂದೆಯೇ ಸೂಚಿಸಲಾಗಿದ್ದು, ಎಂ.ಜಿ.ರಸ್ತೆಯ ಕನ್ಸರ್​ವೆನ್ಸಿಗಳಲ್ಲಿ ಯಾವುದೇ ಕಾರಣಕ್ಕೂ ಫುಟ್ ಪಾತ್ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲಎಂದು ಜ್ಯೋತಿಗಣೇಶ್​ ಭರವಸೆಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net