

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯಲ್ಲಿನ ದೋಷಗಳನ್ನು ಸರಿಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್ಎಸಿಎಲ್) ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್ಗೆ ಪತ್ರ ಬರೆದಿರುವ ಸಂಸದರು, ಹೈಸ್ಕೂಲ್ ವಿದ್ಯಾರ್ಥಿಗಳು ಕೂಡ ಬಿಎಂಆರ್ಸಿಎಲ್ಗಿಂತ ಚೆನ್ನಾಗಿ ಲೆಕ್ಕಾಚಾರ ಮಾಡುತ್ತಾರೆ. ದರ ನಿಗದಿ ಸಮಿತಿ ಶಿಫಾರಸುಗಳ ಪ್ರಕಾರ ದರ ಪರಿಷ್ಕರಣೆ ಮಾಡದೆ ಅಸಮಂಜಸವಾಗಿ ಏರಿಕೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ಸುದೀರ್ಘ ವಿಳಂಬದ ನಂತರ ಬಿಎಂಆರ್ಸಿಎಲ್ ಎಫ್ಎಫ್ಸಿ ವರದಿ ಬಿಡುಗಡೆ ಮಾಡಿತ್ತು. ಶೇ.105 ದರ ಏರಿಕೆ ಮಾಡಿದೆ. ಆದರೆ, ಸರಿಯಾದ ಲೆಕ್ಕಾಚಾರದಂತೆ ಟಿಕೆಟ್ ದರ ಏರಿಕೆ ಸುಮಾರು ಶೇ.50.-55 ಇರಬೇಕು. ನಿರ್ವಹಣೆ ಮತ್ತು ಆಡಳಿತ ವೆಚ್ಚವು ಶೇ.118.5 ಇರಬೇಕು. ಇದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ ಎಂದು ಒತ್ತಾಯಿಸಿದ್ದಾರೆ.