

ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ನಮ್ಮ ಮೆಟ್ರೋ ಹಳದಿ ಮಾರ್ಗ ತಮಿಳುನಾಡು ಗಡಿಪ್ರದೇಶಕ್ಕೆ ಕೇವಲ 14 ಕಿ.ಮೀ. ಹತ್ತಿರವಾಗಿದೆ. ಇದರಿಂದ ನೆರೆಯ ರಾಜ್ಯದಿಂದ ಬೆಂಗಳೂರಿನ ಪ್ರಮುಖ ಕೇಂದ್ರಗಳಿಗೆ ಸಂಚರಿಸುವವರಿಗೆ ಅನುಕೂಲವಾಗಿದೆ. ಕೇವಲ ಒಂದೂವರೆ ತಾಸಿನಲ್ಲಿ ಗಡಿಭಾಗದಿಂದ ಮೆಜೆಸ್ಟಿಕ್ಗೆ ತಲುಪಬಹುದಾಗಿದೆ.
ಆರ್.ವಿ. ರಸ್ತೆ & ಬೊಮ್ಮಸಂದ್ರ ಮಾರ್ಗವು 19.15 ಕಿ.ಮೀ. ಹೊಂದಿದ್ದು, ರಸ್ತೆಯ ಮೂಲಕ ಈ ದೂರವನ್ನು ಕ್ರಮಿಸಲು ಒಂದು ತಾಸಿಗಿಂತ ಅಧಿಕ ಸಮಯ ಬೇಕು. ಆದರೆ, ಮೆಟ್ರೋದಲ್ಲಿ 34 ನಿಮಿಷ ಸಾಕು. ಇದರಿಂದ ಸಾರ್ವಜನಿಕರ ಸಮಯ ಹಾಗೂ ಹಣ ಉಳಿತಾಯ ಆಗುತ್ತಿದೆ. ಈ ಮಾರ್ಗದಲ್ಲಿ ಮೆಟ್ರೋ ಪ್ರಯಾಣಕ್ಕೆ 60 ರೂ. ಇದ್ದು, ಇದೇ ದೂರವನ್ನು ಆಟೋದಲ್ಲಿ ಕ್ರಮಿಸಲು 300 ರೂ., ಹಾಗೂ ಕ್ಯಾಬ್ನಲ್ಲಿ 370 ರೂ. ತಗುಲುತ್ತದೆ. ಸಂಚಾರ ಸಿಕ್ಕಿಗೆ ಸಿಲುಕುವ ಬದಲು ತ್ವರಿತವಾಗಿ ಗಮ್ಯ ಸೇರಲು ಮೆಟ್ರೋ ಸೂಕ್ತ ಎಂಬ ಕಾರಣದಿಂದ ಹಳದಿ ಮಾರ್ಗದತ್ತ ಹೆಚ್ಚಿನ ಮಂದಿ ಆಕರ್ಷಿತರಾಗುತ್ತಿದ್ದಾರೆ.
ನಗರ ದರ್ಶನಕ್ಕೂ ಅವಕಾಶ: ಹಳದಿ ಮಾರ್ಗವು ಪೂರ್ತಿ ಎತ್ತರಿಸಿದ ಮಾರ್ಗವಾಗಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಎರಡೂ ಬದಿಯಲ್ಲಿನ ನಗರ ಸೌಂದರ್ಯವನ್ನು ಸವಿಯಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿ ಮೀರಿ ಗ್ರಾಮೀಣ ಪ್ರದೇಶದತ್ತ ನಗರ ಬೆಳೆವಣಿಗೆ ಹೊಂದುತ್ತಿರುವುದು ಐಟಿ ಕಂಪನಿಗಳ ಕೇಂದ್ರ ಸ್ಥಾನವಾದ ಎಲೆಕ್ಟ್ರಾನಿಕ್ಸ್ ಸಿಟಿಗೆ ಕ್ರಮಿಸುವ ಈ ಹಾದಿಯು ಚೇತೋಹಾರಿಯಾಗಿದೆ. ಬೃಹತ್ ಕಟ್ಟಡಗಳು, ಮೇಲ್ಸೇತುವೆಗಳು ಹೀಗೆ ರಾಜಧಾನಿಯ ಪ್ರಮುಖ ಕೇಂದ್ರದ ದರ್ಶನ ಮಾಡಬಹುದಾಗಿದೆ.
ವಿನೂತನ ಡಿಸ್ಪ್ಲೇ: ಹಳದಿ ಮಾರ್ಗದ ರೈಲುಗಳಲ್ಲಿ "ರಿಯಲ್ ಟೈಮ್ ಟ್ರೇನ್ ಮೋವ್ಮೆಂಟ್' ಬಗ್ಗೆ ತಿಳಿಯಬಹುದು. ಉಳಿದ ಮಾರ್ಗಗಳಲ್ಲಿ ನಿಲ್ದಾಣ ಬಂದಾಗ ಉದ್ಘೋಷಣೆ, ಎಲ್ಇಡಿ ಪರದೆ ಮೂಲಕ ತಿಳಿಯುತ್ತದೆ. ಆದರೆ, ಹಳದಿ ಮಾರ್ಗದಲ್ಲಿ ಡಿಸ್ಪ್ಲೇ ಲಕಗಳಿದ್ದು, ರೈಲು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಕ್ರಮಿಸಿದಂತೆ ಹಿಂದಿನ ನಿಲ್ದಾಣಗಳು ಬೂದು ಬಣ್ಣದಲ್ಲೂ, ಮುಂದೆ ಬರುವ ನಿಲ್ದಾಣಗಳು ಹಳದಿ ಬಣ್ಣದಲ್ಲಿ, ಕ್ರಮಿಸಿದ ದೂರ ಹಸಿರು ಬಣ್ಣದಲ್ಲಿ ಕಾಣಬಹುದು. ಯಾವ ಕಡೆ ಬಾಗಿಲು ತೆರೆಯಲಾಗುತ್ತದೆ ಎಂಬ ಮಾಹಿತಿಯನ್ನೂ ಪರದೆಯಲ್ಲೇ ನೀಡಲಾಗುತ್ತದೆ. ಜಾಹೀರಾತಿಗೂ ಪ್ರತ್ಯೇಕ ಎಲ್ಇಡಿ ಪರದೆಗಳಿವೆ.
* ಬೆಂಗಳೂರಿನ ಮೊದಲ ಚಾಲಕರಹಿತ ರೈಲು
* ಗಂಡಭೇರುಂಡ ಮಾದರಿಯಲ್ಲಿ ರೈಲಿನ ಮುಂಭಾಗದ ವಿನ್ಯಾಸ
* ತಿರುವುಗಳಲ್ಲಿ ಸುಲಭವಾಗಿ ಚಲಿಸಲು 2 ಬೋಗಿಗಳು ಸೇರುವ ಸ್ಥಳದ ವಿಭಿನ್ನ ಡಿಸೈನ್.
* ಟ್ರಾ$್ಯಕ್ ಮಾನಿಟರಿಂಗ್ ವ್ಯವಸ್ಥೆ ಇದ್ದು, ನಿಯಂತ್ರಣ ಕೇಂದ್ರದ ಜತೆ ಸಂಪರ್ಕ.
* ಸೆನ್ಸರ್ ತೀಕ್ಷ$$$$್ಣವಾಗಿದ್ದು, ಬಾಗಿಲಿನ ಹತ್ತಿರ ನಿಂತಿದ್ದರೆ, ಬಾಗಿಲುಗಳು ಮುಚ್ಚಿಕೊಂಡಿದ್ದರೂ ರೈಲು ಮುಂದೆ ಚಲಿಸುವುದಿಲ್ಲ.
* ಬೆಂಕಿ ಅವಡದಂತಹ ತುರ್ತು ಸಂದರ್ಭದಲ್ಲಿ ಮುಂದಿನ ನಿಲ್ದಾಣದಲ್ಲೇ ರೈಲು ನಿಲ್ಲಲಿದೆ.
* ಅಗಲಿದ ನಟಿ, ನಿರೂಪಕಿ ಅಪರ್ಣಾ ಧ್ವನಿ (ಉದ್ಘೋಷಣೆಯಲ್ಲಿ) ಬಳಕೆ.
ಸಮಸ್ಯೆಗಳೇನು?
* ಮೂರು ರೈಲುಗಳು ಮಾತ್ರ ಕಾರ್ಯಾಚರಣಣೆಯಲ್ಲಿ ಇರುವುದರಿಂದ ಈ ಮಾರ್ಗದಲ್ಲಿ ರೈಲುಗಳ ನಡುವಿನ ಅಂತರವು 25&30 ನಿಮಿಷ ಇದೆ. ಪ್ರಯಾಣಿಕರು ಅನಗತ್ಯವಾಗಿ ಹೆಚ್ಚಿನ ಸಮಯ ಕಾಯಬೇಕಿದೆ.
* ಹಳದಿ ಹಾಗೂ ಹಸಿರು ಮಾರ್ಗದ ಇಂಟರ್ಚೇಂಜ್ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ.
* 16 ನಿಲ್ದಾಣಗಳಲ್ಲೂ ಪ್ರಯಾಣಿಕೆರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ.
ಹೆಚ್ಚುತ್ತಿರುವ ರೈಡರ್ಶಿಪ್
ಹಳದಿ ಮಾರ್ಗದಲ್ಲಿ ಮೊದಲ ದಿನ (ಆ.11) 52,215 ಮಂದಿ ಪ್ರಯಾಣಿಸಿದ್ದು, ಆ ದಿನದ ಒಟ್ಟಾರೆ ಪ್ರಯಾಣಿಕರ ಸಂಖ್ಯೆ 10,48,031ಕ್ಕೆ ಏರಿದೆ. 2ನೇ ದಿನವೂ ಹಳದಿ ಮಾರ್ಗದ ಬಹುತೇಕ ನಿಲ್ದಾಣಗಳಲ್ಲಿ ಜನ ದಟ್ಟಣೆ ಕಾಣ ಸಿಕ್ಕಿದ್ದು, ಮಂಗಳವಾರವೂ ರೈಡರ್ಶಿಪ್ ಸೋಮವಾರಕ್ಕಿಂತ ಅಧಿಕವಿರಲಿದೆ.
ನೀಲಿ ಮಾರ್ಗ ನಿರ್ಮಾಣ ಭಾಗಶ ಪೂರ್ಣ
ಬೆಂಗಳೂರು: ಸೆಂಟ್ರಲ್ ಸಿಲ್ಕ್ಬೋರ್ಡ್ನಿಂದ ಕೆ.ಆರ್. ಪುರದವರೆಗೆ ನಮ್ಮ ಮೆಟ್ರೋ ನೀಲಿಮಾರ್ಗದಲ್ಲಿ 2026ರ ಸೆಪ್ಟೆಂಬರ್ ಒಳಗಾಗಿ ರೈಲು ಸಂಚಾರ ಆರಂಭವಾಗುವ ನಿರೀೆ ಇದೆ ಎಂದು ಬಿಎಂಆರ್ ಸಿಎಲ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲೇ ಅತಿಹೆಚ್ಚು ಪ್ರಯಾಣಿಕರ ಒತ್ತಡವಿರುವ ಏರ್ಪೋರ್ಟ್ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನೀಲಿ ಮಾರ್ಗ ಒಟ್ಟು 58.15 ಕಿಮೀ ಹೊಂದಿರಲಿದ್ದು, ಸಿಲ್ಕ್ಬೋರ್ಡ್ನಿಂದ ಕೆ.ಆರ್. ಪುರದವರೆಗಿನ 28 ಕಿಮೀ ಮಾರ್ಗ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಮೂಲಸೌಕರ್ಯ ಅಳವಡಿಕೆ, ತಜ್ಞರ ಪರಿಶೀಲನೆ, ಪರೀಾರ್ಥ ಸಂಚಾರ ಬಳಿಕ ಮುಂದಿನ ವರ್ಷಾಂತ್ಯಕ್ಕೆ ಸಾರ್ವಜನಿಕರಿಗೆ ರೈಲು ಸೇವೆ ಲಭ್ಯವಾಗಲಿದೆ ಎಂದಿದ್ದಾರೆ. ಸೆಂಟ್ರಲ್ ಸಿಲ್ಕ್ಬೋರ್ಡ್& ಕೆ.ಆರ್.ಪುರ (ಹಂತ 2ಎ) ಮತ್ತು ಕೆ.ಆರ್.ಪುರ& ಕೆಐಎ (ಹಂತ 2ಬಿ) ಮಾರ್ಗದಲ್ಲಿನ ಕಾಮಗಾರಿ 2021ರ ಆಗಸ್ಟ್ನಲ್ಲಿ ಆರಂಭವಾಗಿತ್ತು. ನಮ್ಮ ಮೆಟ್ರೋ ಹಂತ 2ಎ ನಲ್ಲಿ ಸೆಂಟ್ರಲ್ ಸಿಲ್ಕ್ಬೋರ್ಡ್, ಎಚ್.ಎಸ್.ಆರ್. ಬಡಾವಣೆ, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ, ಮಾರತ್ತಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಡಿಆರ್ಡಿಒ, ಸ್ಪೋರ್ಟ್ಸ್ ಕಾಂಪ್ಲೆಕ್, ಸರಸ್ವತಿನಗರ, ಕೃಷ್ಣ್ಣರಾಜಪುರ ಹೀಗೆ 14 ನಿಲ್ದಾಣಗಳು ಇರಲಿವೆ.