ಇನ್ಮುಂದೆ ಮೆಟ್ರೋದಲ್ಲಿ ಮೊಬೈಲ್​ ಸಂಪರ್ಕ ಸುಲಭ

METRO ACES
Published on

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ಮಾರ್ಗಗಳಲ್ಲಿ ನಿರಂತರ ಮತ್ತು ಸುಗಮ ಮೊಬೈಲ್​ ಸಂಪರ್ಕವನ್ನು ಒದಗಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಎಡ್ವಾನ್ಸ್​ ಕಮ್ಯೂನಿಕೇಶನ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ ಸಿಸ್ಟಮ್ಸ್​ ಕಂಪನಿ (ಎಸಿಇಎಸ್​) ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್​ ಮಾತನಾಡಿ, ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನಮ್ಮ ಸೇವೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದದ ಭಾಗವಾಗಿ, ಎಸಿಇಎಸ್​ ಇಂಡಿಯಾ ಸಂಸ್ಥೆ ಮದಲ ಹಂತ-ದಲ್ಲಿ ನಾಲ್ಕು ದಿಕ್ಕು ವಿಸ್ತರಣೆಗಳು ಹಾಗೂ ಎರಡನೇ ಹಂತದಲ್ಲಿ ರೀಚ್​-&5 ಮತ್ತು ರೀಚ್​-&6 ಮಾರ್ಗಗಳ ಮೆಟ್ರೋ ನಿಲ್ದಾಣಗಳಲ್ಲಿ ಟೆಲಿಕಾಂ ಇನ್​ಸ್ಟ್ರಕ್ಟರ್​ ಸ್ಥಾಪಿಸಿ ಕಾರ್ಯನಿರ್ವಹಿಸಲಿದೆ. ಈ ಮೂಲಸೌಕರ್ಯವು ಅನೇಕ ಮೊಬೈಲ್​ ನೆಟ್ವರ್ಕ್​ ಆಪರೇಟಗರ್​ಗಳಿಗೆ ಬೆಂಬಲ ನೀಡುತ್ತದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ನಿರಂತರ ಸಂಪರ್ಕ ಸಿಗಲಿದೆ ಎಂದು ಹೇಳಿದರು.

ಒಪ್ಪಂದಕ್ಕೆ ಬಿಎಂಆರ್​ಸಿಎಲ್​ನ ಕಾರ್ಯನಿರ್ವಾಹಕ ನಿರ್ದೇಶಕ (ಸಿಸ್ಟಮ್ಸ್​) ಎ.ಎಸ್​.ಶಂಕರ್​ ಮತ್ತು ಎಸಿಇಎಸ್​ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್​ ಎನ್​. ಮಝರ್​ ಸಹಿ ಹಾಕಿದರು. ಬಿಎಂಆರ್​ಸಿಎಲ್​ನ ನಿರ್ದೇಶಕ ಸುಮಿತ್​ ಭಟ್ನಾಗರ್​, ಎಸಿಇಎಸ್​ ಗ್ರೂಪ್​ ಸಿಇಒ ಡಾ.ಅಕ್ರಮ್​ ಅಬುರಾಸ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net