ಸಾಲಗಾರರ ಕಿರುಕುಳ ಯುವಕ ಸಾವಿಗೆ ಶರಣು

Meter_Baddi
Published on

ಪಾವಗಡ: ಸಾಲಗಾರರ ಕಿರುಕುಳ ತಾಳಲಾರದೆ ಯುವಕನೋರ್ವ ನೇಣಿಗೆ ಶರಣಾದ ಘಟನೆ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಮಂಜುನಾಥ್ (36) ಮೃತ ದುರ್ದೈವಿ. 15ರಿಂದ 20 ಲಕ್ಷ ರೂ., ಸಾಲ ಪಡೆದಿದ್ದ ಮಂಜುನಾಥ್ ಮೀಟರ್ ಬಡ್ಡಿಯಾಗಿ 50 ಸಾವಿರ ರೂ., ಹೆಚ್ಚು ಪಾವತಿಸಬೇಕಾಗಿತ್ತು. ಸಾಲ ಪಡೆದ ಹಣದಲ್ಲಿ ಅರ್ಧದಷ್ಟನ್ನು ಬಡ್ಡಿ ರೂಪದಲ್ಲೇ ಸಾಲಗಾರರಿಗೆ ಪಾವತಿಸಿದ್ದಾರೆ. ಆದರೂ ಸಾಲ ತೀರಿಸಲಾಗದೇ, ಬಡ್ಡಿ ಹಣ ಕಟ್ಟಲಾಗದೇ ಕಂಗಾಲಾಗಿದ್ದ ಮಂಜುನಾಥ್  ಸೋಮವಾರ ಸಾಲಗಾರರ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮೃತ ಮಂಜುನಾಥ್ ಗೆ ಪತ್ನಿ ಮೂವರು ಹೆಣ್ಣುಮಕ್ಕಳಿದ್ದಾರೆ. ವಯಸ್ಸಾದ ತಂದೆ, ತಾಯಿ ಜವಾಬ್ದಾರಿ ಇತ್ತು.

ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net