ಮಾನಸಿಕ ಆರೋಗ್ಯ ಜಾಗೃತಿಗೆ ಪೂರಕ : ವಿವೇಕ್ ಆಳ್ವ ಅನಿಸಿಕೆ

Published on

ಮೂಡುಬಿದಿರೆ: ಮನೋವಿಜ್ಞಾನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಹಾನುಭೂತಿ ನೆಲೆಸಿರಬೇಕು. ಮನೋವಿಜ್ಞಾನದ ಕಾರ್ಯಕ್ರಮಗಳು ವಾನಸಿಕ ಆರೋಗ್ಯದ ಬಗ್ಗೆ ಉತ್ತಮ ತಿಳಿವಳಿಕೆ ಉತ್ತೇಜಿಸುವಲ್ಲಿ ಪೂರಕವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ವಿಶ್ವ ವಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಳ್ವಾಸ್‌ನ ಪದವಿ ಮತ್ತು ಸ್ನಾತಕೋತ್ತರ ಮನೋವಿಜ್ಞಾನ ವಿಭಾಗಗಳ ಆಶ್ರಯ, ಆಳ್ವಾಸ್ ಕ್ಷೇಮ ತರಬೇತಿ ಕೇಂದ್ರದ ಸಹಯೋಗದೊಂದಿಗೆ ವಿಭಾಗದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಮೆಟಾನೋಯಾ ಮನೋವಿಜ್ಞಾನ ಪ್ರದರ್ಶನ ಉದ್ಘಾಟಿಸಿ ವಾತನಾಡಿದರು.

ಪ್ರಾಂಶುಪಾಲ ಡಾ.ಕುರಿಯನ್, ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಆಡ್ರೆ ಪಿಂಟೋ, ಜೋಸ್ವಿಟಾ ಡೆಸಾ, ಆಳ್ವಾಸ್ ಕ್ಷೇಮ ತರಬೇತಿ ಕೇಂದ್ರದ ನಿರ್ದೇಶಕಿ ಡಾ.ದೀಪಾ ಕೊಠಾರಿ, ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ಮೂಕಾಂಬಿಕಾ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಸಾನಾತ್ ಎಂ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net