ಎಂಆರ್‌ಪಿಎಲ್ ಆದಾಯ ಗಣನೀಯ ವೃದ್ಧಿ

blank

ಮಂಗಳೂರು: ಕೇಂದ್ರ ಸರ್ಕಾರದ ಒಎನ್‌ಜಿಸಿ ಸ್ವಾಮ್ಯದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ದ್ವಿತೀಯ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಅವಧಿಯಲ್ಲಿ ಕಳೆದ ಸಾಲಿಗಿಂತ ಗಣನೀಯ ಆದಾಯ ದಾಖಲಿಸಿದೆ.

ಎಂಆರ್‌ಪಿಎಲ್‌ನ 266ನೇ ಸಾಮಾನ್ಯ ಸಭೆ ಶುಕ್ರವಾರ ಕಂಪನಿಯ ಕಚೇರಿಯಲ್ಲಿ ನಡೆಯಿತು. ಈ ವೇಳೆ ಎರಡಮನೇ ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ ಲೆಕ್ಕಾಚಾರವನ್ನು ಮಂಡಿಸಲಾಯಿತು. ಈ ತ್ರೈಮಾಸಿಕ ಸಾಲಿನಲ್ಲಿ ಕಚ್ಚಾ ತೈಲ ಸಂಸ್ಕರಣೆಯಿಂದ 28,786 ಕೋಟಿ ರು. ಆದಾಯ ಲಭಿಸಿದ್ದು, ಕಳೆದ ಬಾರಿ 22,844 ಕೋಟಿ ರು. ಆಗಿತ್ತು. ಅರ್ಧ ವಾರ್ಷಿಕ ಅವಧಿಯಲ್ಲಿ ಈ ಬಾರಿ 56,075 ಕೋಟಿ ರು. ಆದಾಯ ಪಡೆದರೆ, ಕಳೆದ ಬಾರಿ 47,669 ಕೋಟಿ ರು. ಆಗಿತ್ತು. ಈ ತ್ರೈಮಾಸಿಕದಲ್ಲಿ 9,410 ಕೋಟಿ ರು.ಗಳ ತೈಲ ರಫ್ತು ಮಾಡಿದ್ದು, ಕಳೆದ ಅವಧಿಯಲ್ಲಿ 6,974 ಕೋಟಿ ರು. ಆಗಿತ್ತು. ಈ ಅರ್ಧ ವಾರ್ಷಿಕದಲ್ಲಿ 16,974 ಕೋಟಿ ರು. ತೈಲ ರಫ್ತು ಆಗಿದ್ದರೆ, ಕಳೆದ ಅವಧಿಯಲ್ಲಿ ಇದು 13,198 ಕೋಟಿ ರು. ಆಗಿತ್ತು.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಕಳೆದ ಬಾರಿ ಲಾಭಕ್ಕಿಂತ ಮೊದಲಿನ ತೆರಿಗೆ 1,606 ಕೋಟಿ ರು. ಆಗಿದ್ದರೆ, ಈ ಬಾರಿ ನಷ್ಟಕ್ಕಿಂತ ಮೊದಲಿನ ತೆರಿಗೆ 1,041 ಕೋಟಿ ರು.ಗೆ ಇಳಿಕೆಯಾಗಿದೆ. ಕಳೆದ ಅವಧಿಯಲ್ಲಿ ತೆರಿಗೆ ನಂತರದ ಲಾಭ 1,059 ಕೋಟಿ ರು. ಆಗಿದ್ದು, ಈ ಬಾರಿ 682 ಕೋಟಿ ರು.ಗೆ ಇಳಿಕೆಯಾಗಿದೆ. ಅರ್ಧ ವಾರ್ಷಿಕ ಅವಧಿಯಲ್ಲಿ ಕಳೆದ ಬಾರಿ ಲಾಭಕ್ಕಿಂತ ಮೊದಲಿನ ತೆರಿಗೆ 3,164 ಕೋಟಿ ರು. ಆಗಿದ್ದು, ಈ ಬಾರಿ 940 ಕೋಟಿ ರು.ಗೆ ಇಳಿಕೆಯಾಗಿದೆ. ಕಳೆದ ಅವಧಿಯಲ್ಲಿ ತೆರಿಗೆ ನಂತರದ ಲಾಭ 2,072 ಕೋಟಿ ರು. ಆಗಿದ್ದು, ಈ ಬಾರಿ 617 ಕೋಟಿ ರು.ಗೆ ಇಳಿದಿದೆ.

*ಎಂಆರ್‌ಪಿಎಲ್ ಸಾಧನೆಗೆ ವಿವಿಧ ಪ್ರಶಸ್ತಿ

ಆಗಸ್ಟ್ 24ರಂದು ದೇವನಗೊಂಥಿ ಮಾರ್ಕೆಟಿಂಗ್ ಟರ್ಮಿನಲ್ ಕಾರ್ಯಾರಂಭಿಸಿದ್ದು, ತೈಲ ಟ್ಯಾಂಕರ್‌ಗಳಿಗೆ ತೈಲ ತುಂಬಿಸಿಕೊಂಡು ತೆರಳುತ್ತಿವೆ. ಆಲ್ತೂರು ಘಟಕ ಪ್ರತಿ ತಿಂಗಳು 15 ಕೆಟಿಎಲ್ ತೈಲ ಉತ್ಪನ್ನವನ್ನು ಪರಿಪೂರ್ಣವಾಗಿ ಪೂರೈಸುತ್ತಿದೆ. ಎರಡನೇ ಅವಧಿಯಲ್ಲಿ ಕಚ್ಚಾ ತೈಲವನ್ನು ಗರಿಷ್ಠ ಮಟ್ಟದಲ್ಲಿ ಸಂಸ್ಕರಿಸಲಾಗಿದೆ. ಘಟಕದ ಸಾಮರ್ಥ್ಯವನ್ನು ಶೇ.118.3ರಷ್ಟು ಬಳಸಿಕೊಳ್ಳಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ.117.6ರಷ್ಟು ಸಾಮರ್ಥ್ಯ ಬಳಸಲಾಗಿತ್ತು. ಎಂಆರ್‌ಪಿಎಲ್ ಸಾಧನೆಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This Article

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ಕಾಲ ಬಳಸಲು ಫ್ರಿಡ್ಜ್‌ನಲ್ಲಿ ಇಡಬಹುದೇ; ತಜ್ಞರು ಹೇಳುವುದೇನು? | Health Tips

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅನೇಕ ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಅವುಗಳನ್ನು ಸಂಗ್ರಹಿಸಲು ಇದು…

ಈ ಕೆಟ್ಟ ಅಭ್ಯಾಸಗಳಿಂದ ಮಹಿಳೆಯರು ಗರ್ಭಧರಿಸಲು ಸಾಧ್ಯವಾಗುವುದಿಲ್ಲ; ತಿಳಿದುಕೊಳ್ಳಲೇಬೇಕಾದ ಮಾಹಿತಿ |Health Tips

ಥೈರಾಯ್ಡ್, ಪಿಸಿಓಎಸ್ ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳಂತಹ ಹಲವು ಕಾರಣಗಳಿಂದ ಮಹಿಳೆಯರ ಬಂಜೆತನ ಉಂಟಾಗಬಹುದು. ಇದು…

ಇಲ್ಲಿ ಮಹಿಳೆಯರು ಬಿಕಿನಿ ಧರಿಸುವಂತಿಲ್ಲ; ಉಲ್ಲಂಘನೆ ಮಾಡಿದ್ರೆ ಆಗುತ್ತೆ ಕಠಿಣ ಶಿಕ್ಷೆ; ಎಲ್ಲಿ ಗೊತ್ತೆ? | Bikinis

Bikinis : ಸಾಮಾನ್ಯವಾಗಿ ಬೀಚ್​ಗಳಲ್ಲಿ ಯುವತಿಯರು ಸೇರಿದಂತೆ ಮಹಿಳೆಯರು ಬಿಕಿನಿ ಧರಿಸಿ ಓಡಾಡುತ್ತಾರೆ. ಅಲ್ಲದೆ, ನಮ್ಮದೆ…