

ಸಿರಿಗೇರಿ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಮಾಜದ ಏಳಿಗೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ಹೇಳಿದರು.
ಇದನ್ನೂ ಓದಿ:ಅಲ್ಲಮಪ್ರಭುದೇವರ ನೂತನ ದೇವಸ್ಥಾನದ ಲೋಕಾರ್ಪಣೆ
ಹಾಗಲೂರು ಹೊಸಳ್ಳಿ ಗ್ರಾಮದಲ್ಲಿ ಶ್ರೀ ಬನ್ನಿಮಹಾಂಕಾಳಮ್ಮ ದೇವಸ್ಥಾನ ಜೀರ್ಣೊದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುವಾರ ಒಂದು ಲಕ್ಷ ರೂ. ಡಿಡಿ ನೀಡಿ ಮಾತನಾಡಿದರು. ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು, ಭಜನೆ, ದೇವರ ಸ್ಮರಣೆ ಮಾಡುವುದು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿದೆ. ಗ್ರಾಮಿಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ 14 ಸಾವಿರ ದೇವಸ್ಥಾನಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಧರ್ಮಸ್ಥಳದಲ್ಲಿ ಮೇ ತಿಂಗಳಲ್ಲಿ ಸಮೂಹಿಕ ವಿವಾಹ ನೇರವೇರಲಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಿ ಎಂದರು.
ತಾಲೂಕಿನಲ್ಲಿ 52 ನಿರ್ಗತಿಕರಿಗೆ ಮಾತೋಶ್ರೀ ಹೇಮಾವತಿ ಅಮ್ಮನವರ ವಾತ್ಸಲ್ಯ ಕಾರ್ಯಕ್ರಮದಡಿ ನಿರ್ಗತಿಕರ ಮಸಾಶನ, ವಾತ್ಸಲ್ಯ ಕಿಟ್ ವಿತರಿಸಲಾಯಿತು. ಜಲಮಂಗಲ ಕಾರ್ಯಕ್ರದಡಿ 231 ಜನ ಅಂಗವಿಕಲರಿಗೆ ಸಲಕರಣೆ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ, ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಚಂದ್ರಕಾಂತ ರೆಡ್ಡಿ, ಮೇಲ್ವಿಚಾರಕ ಪ್ರಭಯ್ಯ ಸ್ವಾಮಿ, ಸೇವಾ ಪ್ರತಿನಿಧಿ ಆದಿಲಕ್ಷ್ಮೀ, ಸಿಎಸ್‌ಸಿ ಸೇವಾದಾರ ಬಿ.ರಾಜ ಇದ್ದರು.