ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನ: ದಲಿತರಿಂದಲೇ ದಲಿತನಿಗೆ ಬಹಿಷ್ಕಾರ

Suicide attempt
Published on

ಚಾಮರಾಜನಗರ: ದಲಿತ ಕೋಮಿನ ಸ್ವಜಾತಿಯ ಜನರೇ ತಮ್ಮನ್ನು ಬಹಿಷ್ಕಾರ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆಂದು ಮನನೊಂದ ವ್ಯಕ್ತಿಯೊಬ್ಬ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗ್ರಾಮದ‌ ಪುಟ್ಟಯ್ಯ (52)ಆತ್ಮಹತ್ಯೆ ಯತ್ನಿಸಿದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ ಸ್ವಜಾತಿಯ‌ ಜನರೊಂದಿಗೆ ನಡೆದ ಜಗಳದಲ್ಲಿ ಮನನೊಂದು ಪುಟ್ಟಯ್ಯ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.

ಕಳೆದ 5 ವರ್ಷಗಳ‌ ಹಿಂದೆ ಗ್ರಾಮದಲ್ಲಿ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಮಾಡಲು ತಲಾ ಒಂದು ಕುಟುಂಬದಿಂದ 200 ರೂ. ಚಂದ‌ ಕೇಳಲಾಗಿತ್ತು. ಈ ಹಣವನ್ನು ತಡವಾಗಿ ನೀಡಿದ್ದಕ್ಕೆ ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಬೇಕೆಂದು ಗ್ರಾಮದ ಯಜಮಾನರು ತಾಕೀತು ಮಾಡಿದ್ದರು.

ದಂಡವನ್ನು ಕಟ್ಟದ ಕಾರಣಕ್ಕೆ ಅಂದಿನಿಂದ‌ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಪುಟ್ಟಯ್ಯ ತಿಳಿಸಿದ್ದಾರೆ.

ಕಂಡಾಯ‌ ತಂದಿದ್ದಕ್ಕೆ‌ಗಲಾಟೆ: ಗುರುವಾರ ಮನೆಯಲ್ಲಿ ಮಂಟೆಸ್ವಾಮಿ ಕಂಡಾಯ ಪೂಜೆ ಮಾಡಿಸಲು ಚನ್ನಪ್ಪನ ಪುರದಿಂದ ಇಬ್ಬರು ಗುಡ್ಡಪ್ಪರನ್ನ ಕರೆಸಿದ್ದಕ್ಕೆ ಕೋಪಗೊಂಡ ಗ್ರಾಮದ ಯಜಮಾನರು ಜಗಳ‌ ಮಾಡಿದರು. ಇವರ ವಿರುದ್ಧ ಚಾಮರಾಜನಗರ ಗ್ರಾಮಾಂತರ ‌ಪೊಲೀಸ್ ಠಾಣೆಗೆ ದೂರು ನೀಡಿದೆ.‌ ಇದರಿಂದ ಮತ್ತಷ್ಟು ಅಸಮಾಧನಗೊಂಡು ಗುರುವಾರ ರಾತ್ರಿ ಜಗಳ ಮಾಡಿದರು.‌‌ ಇವರು ನೀಡುತ್ತಿರುವ ಕಿರುಕುಳ ತಾಳಲಾದರೆ ಆತ್ಮಹತ್ಯೆ‌‌ ಮಾಡಿಕೊಳ್ಳಲು ಮುಂದಾದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net