

ಹಾಸನ: ಕರೊನಾ ಲಾಕ್ಡೌನ್ನಿಂದ ಮದ್ಯವಿಲ್ಲದೇ ಬರೋಬ್ಬರಿ ಒಂದೂವರೆ ತಿಂಗಳು ಪರದಾಡಿದ್ದ ಕುಡುಕರಿಗೆ ಇದೀಗ ವೈನ್ ಶಾಪ್ ಓಪನ್ ಆಗಿರುವುದು ಸಾಯುವ ಜೀವಕ್ಕೆ ಅಮೃತ ಬಿಟ್ಟಂತಾಗಿದೆ. ಸರ್ಕಾರ ಮದ್ಯದ ತೆರಿಗೆ ಹೆಚ್ಚಿಸಿದರೂ ಸಹ ಮದ್ಯ ಪ್ರಿಯರು ಮಾತ್ರ ಎಣ್ಣೆ ನಶೆಯಲ್ಲಿ ತೇಲಾಡುತ್ತಿದ್ದಾರೆ. ಕೆಲಸವಿಲ್ಲದಿದ್ದರೂ ಎಣ್ಣೆ ಅಂಗಡಿಗಳು ಮಾತ್ರ ಫುಲ್ ಬಿಜಿಯಾಗಿದೆ.
ವಿಪರ್ಯಾಸವೆಂದರೆ ಮದ್ಯಕ್ಕೆ ಜೋತುಬಿದ್ದಿರುವ ವ್ಯಕ್ತಿಯೊಬ್ಬ ಕುಡಿಯಲು ಹಣವಿಲ್ಲದೇ ಮನೆಯಲ್ಲಿದ್ದ ಟಿವಿ ಮಾರಲು ಹೊರಟಂತಹ ಘಟನೆ ಹಾಸನದಲ್ಲಿ ಶುಕ್ರವಾರ ನಡೆದಿದೆ.
ನಗರದ ವಲ್ಲಭಾಯಿ ರಸ್ತೆಯ ನಾಗರಾಜ್ ಎಂಬಾತ ಟಿವಿ ಮಾರಲು ಹೋಗುತ್ತಿದ್ದಾಗ ದಾರಿಹೋಕರು ಪ್ರಶ್ನಿಸಿದ ವೇಳೆ ನಿಜಾಂಶ ಬಾಯಿಬಿಟ್ಟಿದ್ದಾನೆ. ಲಾಕ್ಡೌನ್ನಿಂದ ಕೆಲಸವಿಲ್ಲ, ಸಂಬಳವಿಲ್ಲ, ಮದ್ಯ ಸೇವಿಸಲು ಹಣವಿಲ್ಲ, ಹೀಗಾಗಿ ಟಿವಿ ಮಾರಲು ಹೊಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್)