ನಿಟ್ಟೆಯಲ್ಲಿ ಪುರುಷರ ಹಾಕಿ ಟೂರ್ನಿ

hocky
ನಿಟ್ಟೆ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದಲ್ಲಿ ವಿಟಿಯು ಅಂತರ್ಕಾಲೇಜು ಮಂಗಳೂರು ವಲಯ ಹಾಕಿ ಪುರುಷರ ಪಂದ್ಯಾವಳಿಯನ್ನು ಜ್ಯೋತಿ ಶೆಟ್ಟಿ ಉದ್ಘಾಟಿಸಿದರು
Published on

ಕಾರ್ಕಳ: ವಿಟಿಯು ಅಂತರ್ಕಾಲೇಜು ಮಂಗಳೂರು ವಲಯ ಪುರುಷರ ಹಾಕಿ ಟೂರ್ನಿ ನಿಟ್ಟೆ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಇತ್ತೀಚೆಗೆ ನಡೆಯಿತು.
ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಳೇ ವಿದ್ಯಾರ್ಥಿನಿ ಜ್ಯೋತಿ ಶೆಟ್ಟಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಎಎಂಐಟಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಗಣೇಶ್ ಪೂಜಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯಾ ವಂದಿಸಿದರು. ನಿಟ್ಟೆ ಕ್ಯಾಂಪಸ್‌ನ ಕ್ರೀಡಾ ಆಡಳಿತಾಧಿಕಾರಿ ಶ್ಯಾಮ ಸುಂದರ್ ಎಂ. ಕಾರ್ಯಕ್ರಮ ನಿರೂಪಿಸಿದರು. ಹಾಕಿ ಕೋಚ್ ರವೀಂದ್ರ ಕುಮಾರ್ ಉಪಸ್ಥಿತರಿದ್ದರು.

ಎಂಐಟಿ ಚಾಂಪಿಯನ್

ಪಂದ್ಯಾವಳಿಯಲ್ಲಿ ಅತ್ಯುತ್ತಮ ಕೌಶಲ ಪ್ರದರ್ಶಿಸುವ ಮೂಲಕ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚಾಂಪಿಯನ್ ಆಗಿ ಹೊರಹೊಮ್ಮಿತು. ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗಮನಾರ್ಹ ಪರಾಕ್ರಮ ಪ್ರದರ್ಶಿಸಿ ರನ್ನರ್‌ಅಪ್ ಸ್ಥಾನ ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net