ಏಣಿಯರ್ಪಲ್ಲಿ ಜಯಕೃಷ್ಣನ್‌ಮಾಸ್ತರ್ ಸ್ಮರಣೆ

2
Published on

ಬದಿಯಡ್ಕ: ಸ್ವರ್ಗೀಯ ಜಯಕೃಷ್ಣನ್ ಮಾಸ್ತರ್ ಅವರ 25ನೇ ವರ್ಷದ ಬಲಿದಾನ ದಿನ ಪುಣ್ಯಸ್ಮರಣೆ, ಪುಷ್ಪಾರ್ಚನೆ ನೀರ್ಚಾಲು ಸಮೀಪದ ಏಣಿಯರ್ಪು ಹನುಮಾನ್ ನಗರದಲ್ಲಿ ನಡೆಯಿತು.ಪಂಚಾಯಿತಿ ಪಶ್ಚಿಮ ವಲಯ ಅಧ್ಯಕ್ಷೆ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ವಾರ್ಡ್ ಸದಸ್ಯೆ ಸ್ವಪ್ನಾ ಹರೀಶ್, ಬಿಜೆಪಿ ಜಿಲ್ಲಾ ನೇತಾರ ರಾಮಪ್ಪ ಮಂಜೇಶ್ವರ, ಜಯಕೃಷ್ಣನ್ ಮಾಸ್ತರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಅಲ್ಪಸಂಖ್ಯಾತ ಮೋರ್ಚಾ ನೇತಾರ ರೋಮನ್ ಡಿಸೋಜ, ಏಣಿಯರ್ಪು ಗ್ರಾಮವಿಕಾಸ ಸಮಿತಿ ಸಂಚಾಲಕ ಪ್ರಕಾಶ ಕುಲಾಲ್, ಪಂಚಾಯಿತಿ ಮಾಜಿ ಸದಸ್ಯೆಯರಾದ ಭಾರ್ಗವಿ ಏಣಿಯರ್ಪು, ಪ್ರೇಮ ವಿಷ್ಣುಮೂರ್ತಿ ನಗರ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net